ಹೊಸದಿಲ್ಲಿ: ಯುವಕನೊಬ್ಬ ಪ್ರೀತಿ ನಿರಾಕರಿಸಿದಕ್ಕಾಗಿ 18 ವರ್ಷ ಪ್ರಾಯದ ಯುವತಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ ವಿಕೃತ ಘಟನೆ ದೆಹಲಿಯಲ್ಲಿ ನಡೆದಿದೆ.
ರವಿ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದು, ಸಂಗಮ್ ವಿಹಾರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಇದೀಗ ಪೋಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಯುವತಿಯು ಮತ್ತೊಬ್ಬ ಯುವಕನೊಂದಿಗೆ ಮಾತನಾಡಿದ್ದಕ್ಕೆ ಕೋಪಗೆಂಡ ರವಿ ಯುವತಿಯ ಮೇಲೆ ದುರ್ಬಲಗೊಳಿಸಿದ ಟಾಯ್ಲೆಟ್ ಕ್ಲೀನರ್ ಆಗಿ ಬಳಸುವ ಆ್ಯಸಿಡನ್ನು ಬಾಯಿಗೆ ಸುರಿದಿದ್ದಾನೆ ಎಂದು ಪೊಲೀಸರು ಹೇಳಿದ್ದು, ಇದೀಗ ಯುವತಿಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.