ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರ ಏರ್‌ಪೋರ್ಟ್‌ನಲ್ಲಿ ಎರಡು ಗ್ರೆನೇಡ್‌ಗಳನ್ನು ಸಾಗಿಸುತ್ತಿದ್ದ ಯೋಧನೋರ್ವನನ್ನು ಬಂಧಿಸಲಾಗಿದೆ.
ಬಂಧಿತ ಯೋಧ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸದ್ಯ ಯೋಧನನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಯೋಧನು ದೆಹಲಿಗೆ ಪ್ರಯಾಣಿಸಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಏರ್ಪೋರ್ಟ್ ಸಿಬಂದ್ದಿಯ ತಪಾಸಣೆ ವೇಳೆ ಆತನ ಬ್ಯಾಗ್ನಲ್ಲಿ ಎರಡು ಗ್ರೆನೇಡ್ಗಳು ಪತ್ತೆಯಾಗಿವೆ ಎನ್ನಲಾಗಿದೆ. ಹೀಗಾಗಿ ಯೋಧನನ್ನು ಏರ್ಪೋರ್ಟ್ನಲ್ಲೇ ಬಂಧಿಸಲಾಗಿದೆ.