ಶ್ರೀನಗರ: ಅಪಹರಣ ನಿಗ್ರಹದಳ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಗ್ರೆನೇಡ್ ವಶವಿರಿಸಿಕೊಂಡಿದ್ದ ಯೋಧರೊಬ್ಬರನ್ನು ಬಂಧಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಸೋಮವಾರ ದೆಹಲಿಗೆ ಹೊರಟಿದ್ದ ಯೋಧನನ್ನು ತಪಾಸಣೆಗೊಳಪಡಿಸಿದಾಗ ಬ್ಯಾಗ್‍ನಲ್ಲಿ ಎರಡು ಗ್ರೆನೇಡ್ ಪತ್ತೆಯಾಗಿದೆ.
ಮೇಜರ್ ಅವರು ಇದನ್ನು ತರಲು ಹೇಳಿದ್ದರು ಎಂದು ಯೋಧ ತನಿಖೆ ವೇಳೆ ಹೇಳಿದ್ದು, ಯೋಧನನ್ನು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ ಎಂದು ಬಲ್ಲಮೂಲಗಳು ತಿಳಿಸಿವೆ.
ಉರಿ ಸೇನಾ ನೆಲೆಯಲ್ಲಿ 17 ಜೆಆ್ಯಂಡ್‍ಕೆ ರೈಫಲ್ಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಯೋಧನ ಹೆಸರು ಭೂಪಾಲ್ ಮುಖಿಯಾ. ಈತ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಿವಾಸಿಯಾಗಿದ್ದಾನೆ ಎಂದು ಸುದ್ದಿ ವಾಹಿನಿಗಳ ಪ್ರಕಾರ ವರದಿಯಾಗಿದೆ.
ಇದುವರೆಗೂ ಪೊಲೀಸ್ ಅಥವಾ ಸೇನಾಪಡೆ ಈ ಸುದ್ದಿಯನ್ನು ದೃಢೀಕರಿಸಿಲ್ಲ.