ಹೊಸದಿಲ್ಲಿ: ಮುಸ್ಲಿಂ ಮಹಿಳೆಯರ ಘನತೆ, ಸ್ಥಾನಮಾನ ಹಾಗೂ ಸಂವಿಧಾನ ಕಲ್ಪಿಸಿಕೊಟ್ಟಿರುವ ಮೂಲಭೂತ ಹಕ್ಕುಗಳ ಮೇಲೆ ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಕ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳು ಹಾನಿಯುಂಟುಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ಈ ನಿಲುವಳಿಗೂ ಮುನ್ನ ಸುಪ್ರೀಂಗೆ ಈ ಪದ್ದತಿಗಳ ಆಚರಣೆಯಿಂದಾಗಿ ಮುಸ್ಲಿಂ ಮಹಿಳೆಯರ ಸ್ಥಾನಮಾನ ಹಾಗೂ ಗೌರವಗಳಲ್ಲಿ ಅಸಮಾನತೆ ಉಂಟಾಗುತ್ತದೆ’ ಎಂದು ಪುನರುಚ್ಚರ ಮಾಡಿತ್ತು.
ಸಾಮಾಜಿಕ ಸವಾಲುಗಳಾಗಿರುವ ತ್ರಿವಳಿ ತಲಾಕ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳ ಆಚರಣೆಗಳಿಂದಾಗಿ ಪುರುಷರಿಗೆ ಹೋಲಿಸಿದರೆ ಉಳಿದ ಸಮುದಾಯಗಳ ಮಹಿಳೆಯರಿಗಿಂತ ಮುಸ್ಲಿಂ ಸಮುದಾಯದ ಮಹಿಳೆಯರ ಸ್ಥಾನಮಾನ ಮತ್ತು ಸಂವಿಧಾನ ಕಲ್ಪಿಸಿಕೊಟ್ಟುರುವ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪ್ರತಿಯೊಬ್ಬರಿಗೂ ಸಾಮಾಜಿಕ ಹಾಗೂ ಸ್ವಯಂ ಗೌರವವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಸಂವಿಧಾನದ 21ನೇ ವಿಧಿಯಲ್ಲಿ ಕಲ್ಪಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಈ ಸಂಪ್ರದಾಯಗಳು ಅಸಾಂವಿಧಾನಿಕವಾದವುಗಳು. ಮುಸ್ಲಿಂ ಕಾನೂನುಗಳನ್ನು ಮಾರ್ಪಾಡು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಆರು ದಶಕಗಳಿಂದ ಹೇಳುತ್ತಿದೆಯಾದರೂ ಯಾವುದೇ ಬದಲಾವಣೆಗಳಾಗಿಲ್ಲ. ದೇಶದಲ್ಲಿರುವ ಶೇ.8ರಷ್ಟು ಮುಸ್ಲಿಂ ಮಹಿಳೆಯರ ಸ್ಥಾನಮಾನಗಳು ವಿವಾಹ ವಿಚ್ಛೇದನ ಹಾಗೂ ಮತ್ತಿತರೆ ಕಾರಣಗಳಿಂದಾಗಿ ತೀರಾ ಕೆಳಮಟ್ಟಕ್ಕಿಳಿದಿವೆ ಎಂದು ಹೇಳಿದೆ.
ತ್ರಿವಳಿ ತಲಾಕ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳಿಂದ ಕೇವಲ ಕೆಲವೇ ಕೆಲವು ಮಹಿಳೆಯರು ಮಾತ್ರವೇ ತೊಂದರೆ ಅನುಭವಿಸುತ್ತಿದ್ದಾರಾದರೂ ಎಲ್ಲಾ ಮಹಿಳೆಯರೂ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಭಯ ಹೊಂದಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಕೋರ್ಟ್‌ನ ಸಾಂವಿಧಾನಿಕ ನ್ಯಾಯಪೀಠ ‘ಧಾರ್ಮಿಕ ಭಾವನೆ’ ಸಂಬಂಧಿಸಿದ ಪ್ರಕರಣವೆಂದು ಪರಿಗಣಿಸಿದ್ದು, ಮೇ 11ಕ್ಕೆ ವಿಚಾರಣೆ ನಡೆಸಲಿದ್ದು, ಮಾರ್ಚ್ 30ರಂದು ತ್ರಿವಳಿ ತಲಾಕ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳ ಸಂಬಂಧ ಅಹವಾಲುಗಳನ್ನು ಆಲಿಸಲಾಗಿತ್ತು.