News Kannada
Saturday, October 08 2022

ದೇಶ-ವಿದೇಶ

ವಾಟರ್ ಫೆಸ್ಟಿವಲ್ ನಲ್ಲಿ ಅಪಾರ ಪ್ರಮಾಣದ ಸಾವು-ನೋವು - 1 min read

Photo Credit :

 ವಾಟರ್ ಫೆಸ್ಟಿವಲ್ ನಲ್ಲಿ ಅಪಾರ ಪ್ರಮಾಣದ ಸಾವು-ನೋವು

ಯಾಂಗನ್: ಮಯನ್ಮಾರ್ ನ ಖ್ಯಾತ ವಾಟರ್ ಫೆಸ್ಟಿವಲ್ ನಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ್ದು, ಈ ಬಾರಿ ಬರೊಬ್ಬರಿ 285 ಮಂದಿ ಸಾವನ್ನಪ್ಪಿ, 1073ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ರೀತುಯ ಘಟನೆಯು  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಭಾರಿಯ ಉತ್ಸವದಲ್ಲಿನ ಸಾವಿನ ಸಂಖ್ಯೆಯಲ್ಲಿ 13 ಮಂದಿಯ ಏರಿಕೆಯಾಗಿದೆ. ಕಳೆದ ವರ್ಷ ಇದೇ ವಾಟರ್ ಫೆಸ್ಟಿವಲ್ ನಲ್ಲಿ 272  ಮಂದಿ ಸಾವನ್ನಪ್ಪಿದ್ದರು. ಇನ್ನು ಈ ಉತ್ಸವದ ವೇಳೆ ವಿವಿಧ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಈ ವರೆಗೂ ಸುಮಾರು 1200ಕ್ಕೂ ಅಧಿಕ ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ.  ಕೊಲೆ, ಕಾರು ಅಪಘಾತ, ಮಾದಕ ವಸ್ತುಗಳ ಬಳಕೆ, ಕಳ್ಳತನ, ಅಕ್ರಮ ಶಸ್ತ್ರಾಸ್ತ್ರ, ಸಾಮೂಹಿಕ ಹಿಂಸಾಚಾರ ದಂತಹ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಇನ್ನು ಮಯನ್ಮಾರ್ ದೇಶಾದ್ಯಂತ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿನ ಸಾವಿನ ಸಂಖ್ಯೆ 285ಕರಷ್ಟಿದ್ದು, 1073ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು  ಏರಿಕೆಯಾಗುವ ಸಾಧ್ಯತೆ ಇದೆ. ನೇಯ್ ಪ್ಯಿಟಾವ್ ನಲ್ಲಿ 10 ಮಂದಿ, ಯಾಂಗೊನ್ ನಲ್ಲಿ 44, ಮ್ಯಾಂಡಲೆಯಲ್ಲಿ 36, ಸ್ಯಾಗಿಂಗ್ ಪ್ರಾಂತ್ಯದಲ್ಲಿ 26, ಟ್ಯಾನಿಂತರ್ಯಿ ಪ್ರದೇಶದಲ್ಲಿ 11, ಬಗೋ ಪ್ರದೇಶದಲ್ಲಿ  37, ಮ್ಯಾಗ್ವೇಯಲ್ಲಿ 11, ಸೊಮ  ದಲ್ಲಿ 12, ರಾಖಿನೆ ಪ್ರಾಂತ್ಯದಲ್ಲಿ 17 ಮತ್ತು ಸಾನು ಪ್ರದೇಶದಲ್ಲಿ 29 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

See also  ಸುಪ್ರೀಂಕೋರ್ಟ್ ನಲ್ಲಿ ಕ್ಷಮೆ ಕೋರಿದ ರಾಹುಲ್ ಗಾಂಧಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು