ಕಾಬುಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಶುಕ್ರವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಕನಿಷ್ಠ 50 ಮಂದಿ ಆಫ್ಘಾನಿಸ್ತಾನ ಸೇನೆಯ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಜರ್ ಇ ಷರೀಫ್ ನಗರದ ಉತ್ತರ ಭಾಗದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಸುಮಾರು 10 ಮಂದಿ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ಮನಸೋ ಇಚ್ಝೆ ಗುಂಡಿನ ಸುರಿಮಳೆ ಗರೆದಿದ್ದಾರೆ. ಅಫ್ಘಾನಿಸ್ತಾನ ಸೇನಾ ಸಮವಸ್ತ್ರದಂತೆಯೇ ಬಟ್ಟೆ ತೊಟ್ಟಿದ್ದ ಉಗ್ರರು ಅನುಮಾನ ಬಾರದಂತೆ ಸೇನಾ ಕ್ಯಾಂಪ್ ಪ್ರವೇಶಿಸಿದ್ದರು. ಈ ವೇಳೆ ಗುಂಡಿನ ಮಳೆಗರೆದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ದಾಳಿಯಲ್ಲಿ ಸುಮಾರು 50 ಮಂದಿ ಯೋಧರು ಸಾವನ್ನಪ್ಪಿದ್ದರು.