ಡಮಾಸ್ಕಸ್: ಸಿರಿಯಾದಲ್ಲಿ ಪಾರುಪತ್ಯ ಸಾಧಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಹೆಡೆಮುರಿ ಕಟ್ಟಲು ಅಮೆರಿಕ ಸೇನಾಕಾರ್ಯಚರಣೆ ಮುಂದುವರೆಸಿದ್ದು, ಭಾನುವಾರ ನಡೆದ ದಾಳಿಯಲ್ಲಿ ಭಾರತದ ಕೇರಳ ಮೂಲದ ಉಗ್ರ ಅಬು ತಾಹಿರ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಅಬು ತಾಹಿರ್ ಮೂಲತಃ ಕೇರಳದ ಪಾಲ್ಘಾಟ್ ನವನೆಂದು ತಿಳಿದುಬಂದಿದ್ದು, 2013ರಲ್ಲಿ ಉಮ್ರಾಹ್ ಗೆ ತೆರಳಿದ್ದ ತಾಹಿರ್ ಬಳಿಕ ಮನೆಗೆ ವಾಪಸ್ ಆಗಿರಲಿಲ್ಲಯ ಬಳಿಕ ಶಾರ್ಜಾದಲ್ಲಿರುವ ಸಂಬಂಧಿಕರಿಗೆ ಏಪ್ರಿಲ್ 4ರಂದು ಸಂದೇಶ ರವಾನಿಸಿದ್ದ ತಾಹಿರ್ ತಾನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿರುವುದಾಗಿ ಹೇಳಿದ್ದ. ಇದೀಗ ಅಮೆರಿಕ ದಾಳಿಯಲ್ಲಿ ತಾಹಿರ್ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.