ಶ್ರೀನಗರ: ಶಂಕಿತ ಉಗ್ರಗಾಮಿಗಳು ಸೋಮವಾರ ಮಧ್ಯಾಹ್ನ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಪೊಲೀಸರು, ಜಮ್ಮು ಕಾಶ್ಮೀರ ಬ್ಯಾಂಕಿನ ಇಬ್ಬರು ಉದ್ಯೋಗಿಗಳು ಸೇರಿ ಏಳು ಜನ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಪೊಂಬಯಿ ಗ್ರಾಮದಲ್ಲಿ ನಡೆದಿದೆ.
ಶಂಕಿತ ಉಗ್ರಗಾಮಿಗಳು ಜಮ್ಮು ಕಾಶ್ಮೀರ ಬ್ಯಾಂಕಿನ ಹಣ ಸಾಗಿಸುವ ವಾಹನವನ್ನು ತಡೆದು ಬೇಕಾಬಿಟ್ಟಿ ಗುಂಡು ಹಾರಿಸಿದ್ದು, ದಾಳಿಕೋರರು ಮೃತ ಪೊಲೀಸರ ರೈಫಲ್‌ಗಳನ್ನು ಕೊಂಡು ಹೋಗಿದ್ದು, ವಾಹನವು ಬ್ಯಾಂಕಿನ ನೆಹಾಮ ಶಾಖೆಯಲ್ಲಿ ಹಣ ಇಳಿಸಿ ಕುಲ್ಗಾಂಗೆ ತೆರಳುತ್ತಿತ್ತು. ಎಂದು ವರದಿಯಾಗಿದೆ.