ಇಟಾನಗರ: ಭಯೋತ್ಪಾದಕನೆಂದು ಭಾವಿಸಿ ಅಮಾಯಕ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅರುಣಾಚಲಪ್ರದೇಶದ ಚಂಗ್ಲಾಂಗ್ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ಥಿಂಗ್ತು ನೆಮು ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಮ್ಯಾನ್ಮಾರ್ ಗಡಿ ಭಾಗವಾಗಿರುವ ಚಂಗ್ಲಾಂಗ್ನಲ್ಲಿ ಉಗ್ರರ ಚಲನವಲನ ಹೆಚ್ಚಾಗಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಉಗ್ರರನ್ನು ಸದೆಬಡಿಯಲು ವಿಶೇಷ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಥಿಂಗ್ಲುವನ್ನು ಉಗ್ರರೆಂದೇ ಭಾವಿಸಿ ಗುಂಡಿನ ದಾಳಿ ನಡೆಸಲಾಗಿದೆ.