ವಾಷಿಂಗ್ಟನ್: ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಜಂಟಿ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಭೇಟಿಗೂ ಮೊದಲು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ನನ್ನ ನಿಜವಾದ ಗೆಳೆಯನೊಂದಿಗೆ ಪ್ರಮುಖ ವಿಚಾರಗಳನ್ನು ಚರ್ಚೆ ಮಾಡುವುದಿದೆ ಎಂದು ಬರೆದುಕೊಂಡಿದ್ದಾರೆ.
ಇಂದು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ದ್ವಿಪಕ್ಷಿಯ ಮಾತುಕತೆ ನಡೆಯಲಿದ್ದು, ಮಹತ್ವದ ಒಪ್ಪಂದಗಳು ಏರ್ಪಡುವ ನಿರೀಕ್ಷೆ ಇದೆ. ಭಾರತೀಯ ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳ ಆಂತಕಕ್ಕೆ ಕಾರಣವಾಗಿರುವ H1B ವೀಸಾ ನೀತಿಯ ಸಡಿಲಿಕೆಯ ಕುರಿತು ಮೋದಿ ಪ್ರಸ್ತಾಪಿಸುವ ನಿರೀಕ್ಷೆಗಳಿವೆ. ಇಂದು ವೈಟ್ಹೌಸ್ನಲ್ಲಿ ಟ್ರಂಪ್ ಔತಣಕೂಟವನ್ನು ಆಯೋಜಿಸಿದ್ದು, ಇದರಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಇಂದು ಅಮೆರಿಕ ಪ್ರವಾಸ ಮುಗಿಸಲಿರುವ ಪ್ರಧಾನಿ ಮೋದಿ ನಾಳೆ ನೆದರ್ಲ್ಯಾಂಡ್ಗೆ ತೆರಳಿ ದ್ವಿಪಕ್ಷಿಯ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಮೋದಿ ಭಾರತಕ್ಕೆ ಮರಳಲಿದ್ದಾರೆ.