News Kannada
Friday, December 02 2022

ದೇಶ-ವಿದೇಶ

ಜಿಎಸ್ಟಿ ಗೊಂದಲಕ್ಕೆ ಪರಿಹಾರ, ಬಂತು ಜಿಎಸ್ಟಿ ಆ್ಯಪ್

Photo Credit :

ಜಿಎಸ್ಟಿ ಗೊಂದಲಕ್ಕೆ ಪರಿಹಾರ, ಬಂತು ಜಿಎಸ್ಟಿ ಆ್ಯಪ್

ಹೊಸದಿಲ್ಲಿ: ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಕುರಿತಂತೆ ಗೊಂದಲಗಳು ಮುಂದುವರೆದಿರುವಂತೆಯೇ ಇದಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈಹಾಕಿದ್ದು, ಜಿಎಸ್ ಟಿ ದರ ತೋರಿಸುವ ಜಿಎಸ್ ಟಿ ಆಯಪ್ ಬಿಡುಗಡೆ ಮಾಡಿದೆ.

ಇತ್ತೀಚೆಗೆ ಜಾರಿಗೊಂಡಿರುವ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ ಟಿ) ಪರಿಕರ, ಸಾಮಗ್ರಿಗಳಲ್ಲಿ ಆದ ದರಗಳ ಬದಲಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹೊಸತೊಂದು ಆಯಪ್ ಬಿಡುಗಡೆ ಮಾಡಿದ್ದು, ಕೇಂದ್ರ ಹಣಕಾಸು ಇಲಾಖೆ ಸಚಿವ ಅರುಣ್ ಜೇಟ್ಲಿ ಅವರು, ದೆಹಲಿಯಲ್ಲಿ ಇದನ್ನು ಬಿಡುಗಡೆಗೊಳಿಸಿದರು.

ಯಾವ ಯಾವ ವಸ್ತುಗಳಿಗೆ ಎಷ್ಟು ತೆರಿಗೆ ವಿಧಿಸಲಾಗಿದೆ? ಯಾವುದು ಏರಿಕೆಯಾಗಿದೆ? ಯಾವ ವಸ್ತುವಿನ ಬೆಲೆ ಇಳಿಕೆಯಾಗಿದೆ ಹೀಗೆ ಜಿಎಸ್ಟಿಯ ಹಲವಾರು ವಿಷಯಗಳ ಬಗ್ಗೆ ಜನರಿಗೆ ಅರ್ಥವಾಗದೆ ಗೊಂದಲಕ್ಕೀಡಾಗಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಜಿಎಸ್ಟಿಯ ಬಗ್ಗೆ ನೂತನ ಮೊಬೈಲ್ಆಯಪ್ ನ್ನು ಬಿಡುಗಡೆ ಮಾಡಿದ್ದು, ಇದರಿಂದ ಬೆರಳ ತುದಿಯಲ್ಲೇ ಜಿಎಸ್ಟಿ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಳ್ಳಬಹುದಾಗಿದೆ.

ಜಿಎಸ್ಟಿಯ ಸಮಗ್ರ ಮಾಹಿತಿಯನ್ನೊಳಗೊಂಡ ‘ಜಿಎಸ್ಟಿ ಫೈಂಡರ್ಆಯಪ್’ಗ್ರಾಹಕರು, ವರ್ತಕರು, ವಿದ್ಯಾರ್ಥಿಗಳು ಯಾರೇ ಬೇಕಾದರೂ ಬಳಕೆ ಮಾಡ ಬಹುದಾಗಿದ್ದು, ವಿವಿಧ ವಸ್ತುಗಳಿಗೆ ಅನ್ವಯವಾಗುವ ಜಿಎಸ್ಟಿ ದರವನ್ನು ಗ್ರಾಹಕರು ಈ ಆಯಪ್ನಲ್ಲಿ ಹುಡುಕ ಬಹುದಾಗಿದೆ. ಈ ಆಯಪ್ ನ ವಿಶೇಷತೆ ಎಂದರೆ ಒಂದು ಬಾರಿ ಡೌನ್ಲೋಡ್ಮಾಡಿದ ಬಳಿಕ ಈ ಆಯಪ್ ಅನ್ನು ಆಫ್ಲೈನ್ಇದ್ದರೂ ಕೂಡಾ ಬಳಸಬಹುದಾಗಿದ್ದು, ಗೂಗಲ್ಪ್ಲೇ ಸ್ಟೋರ್ನಲ್ಲಿ ಈ ಆಯಪ್ ಸಿಗಲಿದೆ.

GST rate finder’ ಎಂಬ ಹೆಸರನ್ನೇ ಹೊಂದಿರುವ ಈ ಅಪ್ಲಿಕೇಶನ್ ನಿಂದಾಗಿ ಜನರಿಗೆ ತಾವುಕೊಳ್ಳಲಿರುವ ಸರಕು ಅಥವಾ ಸಾಮಗ್ರಿಗಳ ಬೆಲೆಯ ಹಿಂದಿನ ಹಾಗೂ ಈಗಿರುವ ಬೆಲೆಯ ವ್ಯತ್ಯಾಸಗಳನ್ನು ತಿಳಿಯಲು ಅನುಕೂಲ ಕಲ್ಪಿಸುತ್ತದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಆಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಮೊಬೈಲ್ ಗಳಿಗೆ ಈ ಆಯಪ್ ದೊರೆಯುತ್ತಿದ್ದು, ಶೀಘ್ರದಲ್ಲೇ ಐ-ಒಎಸ್ ಗೂ ಈ ಆಯಪ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

See also  ಅರಣ್ಯ ರಕ್ಷಕರಿಗೆ ಬುಲೆಟ್‌ ಪ್ರೂಫ್‌ ಜಾಕೆಟ್‌, ಆಯುಧ ನೀಡಲು ಸುಪ್ರೀಂ ಕೋರ್ಟ್‌ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು