News Kannada
Wednesday, November 30 2022

ದೇಶ-ವಿದೇಶ

ಬಂಟರ ಸಂಘ ಅಂಧೇರಿ- ಬಾಂದ್ರ ಪ್ರಾದೇಶಿಕ ಸಮಿತಿಯಿಂದ ಆಟಿ ತಿಂಗೊಲ್ದ ಒಂಜಿ ದಿನ - 1 min read

Photo Credit :

ಬಂಟರ ಸಂಘ ಅಂಧೇರಿ- ಬಾಂದ್ರ ಪ್ರಾದೇಶಿಕ ಸಮಿತಿಯಿಂದ ಆಟಿ ತಿಂಗೊಲ್ದ ಒಂಜಿ ದಿನ

ಮುಂಬಯಿ: ಬಂಟರ ಸಂಘ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ಕಳೆದ ಎರಡು ವರ್ಷದಿಂದ ಆಟಿ ತಿಂಗಳನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದೆ. ಒಳನಾಡು ಹಾಗೂ ಹೊರನಾಡಿನಲ್ಲಿ ನೊಂದವರ ನೋವಿಗೆ ಸ್ಪಂದಿಸುತ್ತಿದ್ದು ಕಳೆದ ವರ್ಷ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ವೃದ್ದಾಶ್ರಮಕ್ಕೆ 25000 ರೂ ನಗದು ನೀಡಿ ಸಹಕರಿಸಿದೆ. ಕರ್ಜತ್ ನ ಆದಿವಾಸಿ ಪ್ರದೇಶದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡಿ ಅವರಿಗೆ ನಗದು, ಅಗತ್ಯ ವಸ್ತುಗಳನ್ನು, ಅಹಾರ, ವಸ್ತ್ರವನ್ನು ನೀಡಿದೆ ಎನ್ನಲು ಅಭಿಮಾನವೆನಿಸುತ್ತದೆ. ಈ ವರ್ಷವೂ ಅನಾಥಾಶ್ರಮಕ್ಕೆ ಭೇಟಿ ನೀಡುವ ಪೂರ್ವ ತಯಾರಿಯೂ ಆಗಿದೆ. ಈ ನಡುವೆ ಇತ್ತೀಚೆಗೆ ಯಾವ ಆಡಂಬರವೂ ಇಲ್ಲದೆ ಸರಳವಾಗಿ ಮನೆಯಲ್ಲೇ ತಯಾರಿಸಿದ ಆಟಿ ತಿಂಗಳಲ್ಲಿ ಕಾಡುತ್ತಿದ್ದ ಬಡತನದಲ್ಲಿ ತಿನ್ನುತ್ತಿದ್ದ ತಿಂಡಿ ತಿನುಸುಗಳನ್ನು ಸಮಿತಿಯವರ ಉಪಸ್ಥಿತಿಯಲ್ಲಿ ಹಂಚಲಾಯಿತು.ಈ ಸಂದರ್ಭದಲ್ಲಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುಣಪಾಲ ಶೆಟ್ಟಿ ಐಕಳ, ಉಪಾಧ್ಯಕ್ಷರಾದ ಬಿ.ಆರ್. ಪೂಂಜ, ಕಾರ್ಯದರ್ಶಿ ಗಣೇಶ್ ಶೆಟ್ಟಿ, ,ರಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುಜಾತ ಗುಣಪಾಲ್ ಶೆಟ್ಟಿ ಇವರ ಮುಂದಾಳತ್ವದಲ್ಲಿ ಮಹಿಳಾ ವಿಭಾಗದ ವನಿತಾ ನೋಂಡ, ಗೀತಾ ಶೆಟ್ಟಿ ಸ್ಮಿತಾ ಆರ್ ಶೆಟ್ಟಿ ಪ್ರೇಮಾ ಶೆಟ್ಟಿ ಸವಿತಾ ಶೆಟ್ಟಿ ಶೋಭಾ ಆರ್ ರೈ ವಿಂದ್ಯಾ ಬಲ್ಲಾಳ್ ಮೊದಲಾದವರು ಸ್ವಾದಿಷ್ಟ ಹಾಗೂ ಆರೋಗ್ಯಪೂರ್ಣ ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಯಾವುದೇ ಆಡಂಬರವಿಲ್ಲದೆ ಸದಾ ಸಮಾಜಪರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಆಟಿ ತಿಂಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ.

See also  ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಹರ್ಷವರ್ಧನ್ ವಾಗ್ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು