News Kannada
Friday, September 30 2022

ದೇಶ-ವಿದೇಶ

ಜುಟ್ಟು ಕತ್ತರಿಸುವಾತನೆಂದು ಶಂಕಿಸಿ ಕಲ್ಲು ಹೊಡೆದು ಕೊಂದರು! - 1 min read

Photo Credit :

ಜುಟ್ಟು ಕತ್ತರಿಸುವಾತನೆಂದು ಶಂಕಿಸಿ ಕಲ್ಲು ಹೊಡೆದು ಕೊಂದರು!

ಶ್ರೀನಗರ: ಮಹಿಳೆಯರ ಜುಟ್ಟು ಕತ್ತರಿಸಿ ಓಡಿ ಹೋಗುವ ಪ್ರಸಂಗವು ಕಳೆದ ಕೆಲವು ದಿನಗಳಿಂದ ಕಣಿವೆ ರಾಜ್ಯದಲ್ಲಿ ನಡೆಯುತ್ತಲಿದ್ದು, ಇದೇ ಭೀತಿಯಲ್ಲಿ ದಿನ ಕಳೆಯುತ್ತಿದ್ದ ಜನರು ಮಸೀದಿಯಿಂದ ಹೊರಬರುತ್ತಿದ್ದ ವ್ಯಕ್ತಿಯೊಬ್ಬರನ್ನು ಜುಟ್ಟು ಕತ್ತರಿಸುವಾತನೆಂದು ಶಂಕಿಸಿ ಕಲ್ಲು ಬಿಸಾಕಿ ಕೊಂದು ಹಾಕಿದ ಘಟನೆ ಇಲ್ಲಿ ನಡೆದಿದೆ.

ಅನಂತನಾಗ್ ಜಿಲ್ಲೆಯ ದಾಂತೇರ್ ಗ್ರಾಮದಲ್ಲಿ ಶುಕ್ರವಾರ ರಾತ್ರಿಯ ನಮಾಜ್ ಮುಗಿಸಿಕೊಂಡು ಮಸೀದಿಯಿಂದ ಹೊರಬರುತ್ತಿದ್ದ 70ರ ಹರೆಯದ ವೃದ್ಧ ಅಬ್ದುಲ್ ಸಲೇಂ ವಾಣಿ ಎಂಬರಿಗೆ ಯುವಕನೊಬ್ಬ ಕಲ್ಲು ತೂರಿದ್ದಾನೆ. ರಾತ್ರಿ ವೇಳೆ ಜುಟ್ಟು ಕತ್ತರಿಸುವ ವ್ಯಕ್ತಿ ವಾಣಿಯೆಂದು ಯುವಕ ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಘಟನೆ ಬಗ್ಗೆ ನಮಗೆ ಮಾಹಿತಿಯಿಲ್ಲ. ಯಾವುದೇ ದೂರು ಅಥವಾ ವರದಿ ನಮಗೆ ಸಿಕ್ಕಿಲ್ಲ ಎಂದು ಅನಂತನಾಗ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ವಾಣಿ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು. ಈ ಘಟನೆ ಬಗ್ಗೆ ಪೊಲೀಸರಿಗೆ ಯಾಕೆ ದೂರು ನೀಡಿಲ್ಲವೆಂದು ಕೇಳಿದಾಗ, ಇದು ಒಂದು ಆಕಸ್ಮಿಕ ಘಟನೆ ಎಂದು ಸ್ಥಳೀಯರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಹಿಳೆಯರ ಜುಟ್ಟು ಕತ್ತರಿಸುವ ಹಲವಾರು ಘಟನೆಗಳು ನಡೆದಿದ್ದು, ಜನರು ಭಯಭೀತರಾಗಿದ್ದಾರೆ. ಮಹಿಳೆಯರ ವೇಷದಲ್ಲಿ ತಿರುಗುತ್ತಿದ್ದ ಲಿಂಗ ಪರಿವರ್ತನೆ ಮಾಡಿರುವ ವ್ಯಕ್ತಿಯೊಬ್ಬನನ್ನು ಜುಟ್ಟು ಕತ್ತರಿಸುವಾತನೆಂದು ತಿಳಿದ ಜನರು ಸರಿಯಾಗಿ ಥಳಿಸಿದ್ದರು.
ಜನರು ಥಳಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ರೀತಿ ನಗರದ ನಿಶಾತ್ ಪ್ರದೇಶದಲ್ಲೂ ಇದೇ ರೀತಿ ಜನರು ವ್ಯಕ್ತಿಯೊಬ್ಬನನ್ನು ಥಳಿಸಿದ್ದರು.

See also  ತಿರುಪತಿ ತಿರುಮಲ ; ಬಿಜೆಪಿಯ ರತ್ನ ಪ್ರಭಾ ಗೆ ತೀವ್ರ ಹಿನ್ನಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು