News Kannada
Sunday, September 25 2022

ದೇಶ-ವಿದೇಶ

ಸ್ವಿಸ್ ದಂಪತಿ ಮೇಲೆ ದಾಳಿ: ವರದಿ ಕೇಳಿದ ಸುಷ್ಮಾ ಸ್ವರಾಜ್ - 1 min read

Photo Credit :

ಸ್ವಿಸ್ ದಂಪತಿ ಮೇಲೆ ದಾಳಿ: ವರದಿ ಕೇಳಿದ ಸುಷ್ಮಾ ಸ್ವರಾಜ್

ನವದೆಹಲಿ: ತಾಜ್ ಮಹಲ್ ಗೆ ಭೇಟಿ ನೀಡಿ ಮರಳುತ್ತಿದ್ದ ಮರುದಿನ ಸ್ವಿಸ್ ಜೋಡಿ ಮೇಲೆ ಗುಂಪೊಂದು ನಡೆಸಿದ ದಾಳಿಯ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉತ್ತರ ಪ್ರದೇಶ ಸರ್ಕಾರದಿಂದ ವರದಿ ಕೇಳಿದ್ದಾರೆ.

ಭಾನುವಾರ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಕ್ವೆಂಟಿನ್ ಜೆರಮಿ ಕ್ಲರ್ ಎನ್ನುವವನ ತಲೆಗೆ ಗಂಭೀರವಾದ ಗಾಯವಾಗಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಜೋಡಿಯನ್ನು ಭೇಟಿಯಾದರು.

ಕ್ವೆಂಟಿನ್ ಮತ್ತು ಆತನ ಗೆಳತಿ ಮೇರಿ ಡ್ರೋಕ್ಸ್ ಸ್ವಿಟ್ಜರ್ಲೆಂಡ್ ನಿಂದ ಭಾರತ ಪ್ರವಾಸಕ್ಕೆ ಆಗಮಿಸಿದ್ದರು. ಆಗ್ರಾದಲ್ಲಿರುವ ತಾಜ್ ಮಹಲ್ ಗೆ ಭೇಟಿ ನೀಡಿದ ಬಳಿಕ ಫತೇಪುರದಲ್ಲಿರುವ ಸಿರ್ಕಿಗೆ ಭಾನುವಾರ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ನಾಲ್ಕು ಮಂದಿ ಸುಮಾರು ಒಂದು ಗಂಟೆ ಕಾಲ ಕಿರುಕುಳ ನೀಡಿ ಹಲ್ಲೆ ನಡೆಸಿದ್ದರು.

ಅವರು ಒಂದು ಗಂಟೆ ಕಾಲ ನಮ್ಮನ್ನು ಹಿಂಬಾಲಿಸಿದರು. ನಮ್ಮ ವಿರೋಧವಿದ್ದರೂ ಫೋಟೊ ತೆಗೆಯುತ್ತಲೇ ಇದ್ದರು ಎಂದು ಕ್ಲರ್ ಮಾಧ್ಯಮಗಳಿಗೆ ತಿಳಿಸಿದರು. ನಾಲ್ಕು ಮಂದಿಯಲ್ಲಿ ಒಬ್ಬನನ್ನು ಈಗಾಗಲೇ ಬಂಧಿಸಲಾಗಿದೆ.

See also  ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಎರಡನೇ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು