News Kannada
Friday, October 07 2022

ದೇಶ-ವಿದೇಶ

ಗೂಳಿ ತಿವಿತದಿಂದ ಬಚಾವಾದ ಕನಸಿನ ಕನ್ಯೆ! - 1 min read

Photo Credit :

ಗೂಳಿ ತಿವಿತದಿಂದ ಬಚಾವಾದ ಕನಸಿನ ಕನ್ಯೆ!

ಮಥುರಾ: ಬಿಜೆಪಿ ಸಂಸದೆ ಹಾಗೂ ನಟಿ ಹೇಮಮಾಲಿನಿ ಅವರು ಮಥುರಾ ರೈಲ್ವೆ ನಿಲ್ದಾಣದಲ್ಲಿ ಗೂಳಿ ತಿವಿತಕ್ಕೆ ಒಳಗಾಗುವುದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಘಟನೆ ನಡೆದ ಒಂದು ದಿನದ ಬಳಿಕ ನಿಲ್ದಾಣದ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ.

ಹೇಮಮಾಲಿನಿ ಭೇಟಿ ವೇಳೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲವೆಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ. ಇದರ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ ಎಂದು ಉತ್ತರ ಕೇಂದ್ರ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂಚಿತ್ ತ್ಯಾಗಿ ಅವರು ತಿಳಿಸಿದ್ದಾರೆ.

ನಿಲ್ದಾಣಕ್ಕೆ ಹೊಸ ರೂಪ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಹೋಗಿದ್ದಾಗ ಅಲ್ಲಿದ್ದ ಗೂಳಿಯೊಂದು ಹೇಮಮಾಲಿನಿ ಅವರನ್ನು ತಿವಿಯಲು ಮುಂದಾಗಿದೆ. ಆದರೆ ಹೇಮಮಾಲಿನಿ ಸ್ವಲ್ಪದರಲ್ಲಿಯೇ ಬಚಾವಾಗಿದ್ದಾರೆ ಎಂದು ತ್ಯಾಗಿ ವಿವರಿಸಿದ್ದಾರೆ.

See also  ಭಾರತದ ವಾಯುನೆಲೆ ಪ್ರವೇಶಿಸಿದ ಪಾಕಿಸ್ತಾನದಿಂದ ಬಂದ ಕಾರ್ಗೊ ವಿಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು