News Kannada
Monday, October 03 2022

ದೇಶ-ವಿದೇಶ

ನೋಟ್ ಬಳಿಕ ಡೆಬಿಟ್, ಕ್ರೆಡಿಟ್ ಕಾರ್ಡ್ ಸರದಿ…! - 1 min read

Photo Credit :

ನೋಟ್ ಬಳಿಕ ಡೆಬಿಟ್, ಕ್ರೆಡಿಟ್ ಕಾರ್ಡ್ ಸರದಿ...!

ನವದೆಹಲಿ: ನೋಟು ನಿಷೇಧದ ಬಳಿಕ ಈಗ ಕಾರ್ಡ್ ಬಳಕೆ ಹೆಚ್ಚಾಗುತ್ತಲಿದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನ್ನು ಭಾರತವು ಹೊರಹಾಕಲಿದೆ ಎಂದು ನೀತಿ ಆಯೋಗದ ಸಿಇಓ ಹೇಳಿದ್ದಾರೆ.

ಕೇವಲ ನಾಲ್ಕೇ ವರ್ಷದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ಕೇಂದ್ರಗಳು ಇತಿಹಾಸದ ಪುಟಗಳನ್ನು ಸೇರಲಿದೆ ಎಂದು ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟು ನಿಷೇಧ ಬಳಿಕ ಭಾರತದಲ್ಲಿ ಜನರು ಕ್ಯಾಶ್ ಲೆಸ್ ವಹಿವಾಟಿಗೆ ಹೊಂದಿಕೊಳ್ಳಲು ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಎಟಿಎಂ ಕೇಂದ್ರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನೇಪಥ್ಯಕ್ಕೆ ಸರಿಯಲಿದೆ. ಕೇವಲ ಮೊಬೈಲ್ ನಲ್ಲೇ ಎಲ್ಲಾ ವಹಿವಾಟು ನಡೆಯಲಿದೆ ಎಂದು ನೊಯ್ಡಾದ ಅಮಿಟಿ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದರು.

ಯುವ ಸಮುದಾಯವು ಭಾರತದ ಅಭಿವೃದ್ಧಿಗೆ ದೊಡ್ಡ ಪುಷ್ಠಿ ನೀಡುತ್ತಿದೆ. ಭಾರತವು ನೂರು ಕೋಟಿ ಬಯೋಮೆಟ್ರಿಕ್ಸ್ ಮತ್ತು ನೂರು ಕೋಟಿ ಮೊಬೈಲ್ ಮತ್ತು ನೂರು ಕೋಟಿ ಬ್ಯಾಂಕ್ ಅಕೌಂಟ್ ಗಳು ಇವೆ. ಹೀಗೆ ಇರುವ ವಿಶ್ವದ ಏಕೈಕ ರಾಷ್ಟ್ರ ಭಾರತವಾಗಿದೆ ಎಂದರು.

2040ರಲ್ಲಿ ಭಾರತದಲ್ಲಿ ಯುವಸಮುದಾಯವೇ ತುಂಬಿ ತುಳುಕಲಿದೆ. ಅಮೆರಿಕ, ಯುರೋಪ್ ಮೊದಲಾದ ರಾಷ್ಟ್ರಗಳಿಗೆ ಈ ಭಾಗ್ಯವಿಲ್ಲ. ಭಾರತವು 9-10 ಶೇ.ದಷ್ಟು ಬೆಳವಣಿಗೆ ಕಾಣಲಿದೆ ಎಂದು ಅಮಿತಾಬ್ ಕಾಂತ್ ತಿಳಿಸಿದ್ದಾರೆ.

See also  ಮರುನಾಮಕರಣದೊಂದಿಗೆ ಮತ್ತೆ ಭಾರತವನ್ನು ಪ್ರವೇಶಿಸಲಿದೆ ಪಬ್ಜಿ ಗೇಮ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು