News Kannada
Sunday, September 25 2022

ದೇಶ-ವಿದೇಶ

ದಲಿತನ ಮರ್ಯಾದೆ ಹತ್ಯೆ ಪ್ರಕರಣದ ಆರು ಅಪರಾಧಿಗಳಿಗೆ ಗಲ್ಲು - 1 min read

Photo Credit :

ದಲಿತನ ಮರ್ಯಾದೆ ಹತ್ಯೆ ಪ್ರಕರಣದ ಆರು ಅಪರಾಧಿಗಳಿಗೆ ಗಲ್ಲು

ತಿರುಪುರ: ಕಳೆದ ವರ್ಷ ಉದುಮಲಪೇಟದಲ್ಲಿ ನಡೆದ ದಲಿತನ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರು ಮಂದಿಗೆ ತಿರುಪುರ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿ ಶಂಕರ್ ಹತ್ಯೆಯಾಗಿದ್ದ ಯುವಕ. ಈತನ ಮೇಲೆ ಸಾರ್ವಜನಿಕವಾಗಿಯೇ ದಾಳಿ ಮಾಡಿದ್ದ ಯುವತಿಯ ಮನೆಯವರು ಜನರ ಎದುರಲ್ಲೇ ಹತ್ಯೆ ಮಾಡಿದ್ದರು.

ವಿಚಾರಣೆ ನಡೆಸಿದ ತಿರುಪುರ ಸೆಷನ್ಸ್ ಕೋರ್ಟ್ ಯುವತಿ ಕೌಶಲ್ಯ ತಂದೆ ಚಿನ್ನಸ್ವಾಮಿ ಸೇರಿದಂತೆ ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದೆ. ಇತರ ಐದು ಮಂದಿ ಅಪರಾಧಿಗಳ ಪೈಕಿ ಓರ್ವನಿಗೆ ಜೀವಾವಧಿ, ಮತ್ತೋರ್ವನಿಗೆ ಐದು ವರ್ಷ ಜೈಲು ಹಾಗೂ ಮೂವರನ್ನು ಖುಲಾಸೆ ಮಾಡಿದೆ.

ತಿರುಪುರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರಾಗಿರುವ ಅಲಮೇಲು ನಟರಾಜನ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.

2016ರ ಮಾರ್ಚ್ 13ರಂದು ಶಂಕರ್ ಮತ್ತು ಆತನ ಪತ್ನಿ ಮೇಲೆ ಗುಂಪೊಂದು ಕೆಲವು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹಲ್ಲೆ ಮಾಡಿತ್ತು. ಶಂಕರ್ ಹಲ್ಲೆಯಿಂದ ಸ್ಥಳದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದ. ಕೌಶಲ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ತುರ್ತು ನಿಗಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಹತ್ಯೆಗೆ ತನ್ನ ಮನೆಯವರೇ ಕಾರಣವೆಂದು ಕೌಶಲ್ಯ ಪೊಲೀಸರಿಗೆ ಹೇಳಿಕೆ ನೀಡಿದ್ದಳು.

ಪಲನಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಅವರಿಬ್ಬರು ಪ್ರೀತಿಸಲು ಆರಂಭಿಸಿದ್ದರು. ಹತ್ಯೆಯಾಗುವ ಎಂಟು ತಿಂಗಳ ಮೊದಲಷ್ಟೇ ಮದುವೆಯಾಗಿದ್ದರು.

See also  ಒಂದೇ ದಿನದಲ್ಲಿ 5611 ಕೊರೋನಾ ಪ್ರಕರಣ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು