News Kannada
Wednesday, September 28 2022

ದೇಶ-ವಿದೇಶ

ಅತ್ತಿಗೆ ಜತೆ ಬಲವಂತದ ಮದುವೆಗೆ ಬಲಿಯಾದ ಬಾಲಕ! - 1 min read

Photo Credit :

ಅತ್ತಿಗೆ ಜತೆ ಬಲವಂತದ ಮದುವೆಗೆ ಬಲಿಯಾದ ಬಾಲಕ!

ಪಾಟ್ನಾ: ಕೆಲವು ಸಂಬಂಧಗಳಿಗೆ ಬೆಲೆ ಇರಲ್ಲ, ಇನ್ನು ಕೆಲವು ಸಂಬಂಧಗಳು ಅದಾಗಿಯೇ ಹುಟ್ಟುಕೊಳ್ಳುತ್ತವೆ. ಕೆಲವರು ಸಂಬಂಧಗಳನ್ನು ತುಂಬಾ ಭಾವನಾತ್ಮಕವಾಗಿ ನೋಡುತ್ತಾರೆ. ಹೀಗಾಗಿಯೇ ಈ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವುದು.

ತನ್ನ ಅಣ್ಣನ ಸಾವಿನ ಬಳಿಕ ಹಿರಿಯರ ಒತ್ತಾಯದಿಂದ ಮದುವೆಯಾದ 15ರ ಹರೆಯದ ಅಪ್ರಾಪ್ತ ಬಾಲಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಗಯಾ ಜಿಲ್ಲೆಯ ವಿನೋಭಾನಗರದಲ್ಲಿ ನಡೆದಿದೆ.

ತನಗಿಂತ ಹತ್ತು ವರ್ಷ ದೊಡ್ಡವರಾಗಿರುವ ಅತ್ತಿಗೆ ರೂಬಿ ದೇವಿಯೊಂದಿಗೆ ಮದುವೆಯಾದ 9ನೇ ತರಗತಿ ಓದುತ್ತಿದ್ದ ಮಹದೇವ್ ಕುಮಾರ್ ದಾಸ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೆರೆಮನೆಯವರ ಪ್ರಕಾರ ಮಹದೇವ್ ಕುಮಾರ್ ಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗಿತ್ತು. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೂಬಿ ದೇವಿ ಪತಿ ಸಂತೋಷ್ ಕುಮಾರ್ 2013ರಲ್ಲಿ ಎಲೆಕ್ಟ್ರಿಕ್ ಶಾಪ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 80 ಸಾವಿರ ರೂ. ಪರಿಹಾರ ಹಣ ಬಂದಿತ್ತು. ಇದಕ್ಕೆ ರೂಬಿ ಮತ್ತು ಆಕೆಯ ಪತಿಯ ಮನೆಯವರ ಮಧ್ಯೆ ಜಗಳವಾಗಿತ್ತು. ಈ ಹಣ ಬೇರೆಯವರಿಗೆ ಸಿಗಬಾರದೆಂಬ ಕಾರಣಕ್ಕಾಗಿ ರೂಬಿ ದೇವಿಯನ್ನು ಮಹದೇವ್ ಕುಮಾರ್ ಗೆ ಮದುವೆ ಮಾಡಲಾಗಿತ್ತು.

See also  ಹಿಮಪಾತದಲ್ಲಿ ಕರ್ನಾಟಕದ ಯೋಧ ಹುತಾತ್ಮ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು