News Kannada
Thursday, September 29 2022

ದೇಶ-ವಿದೇಶ

ಗುಜರಾತ್ ನರ್ವಸ್ ನೈಂಟಿ: ಹಿಮಾಚಲ ಪ್ರದೇಶ ಗೆದ್ದ ಬಿಜೆಪಿ - 1 min read

Photo Credit :

ಗುಜರಾತ್ ನರ್ವಸ್ ನೈಂಟಿ: ಹಿಮಾಚಲ ಪ್ರದೇಶ ಗೆದ್ದ ಬಿಜೆಪಿ

ನವದೆಹಲಿ: ಗುಜರಾತ್ ನಲ್ಲಿ ಆಡಳಿತ ವಿರೋಧಿ ಅಲೆಯು ತಕ್ಕಮಟ್ಟಿಗೆ ಕಂಡುಬಂದರೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್ ನಿಂದ ಬಿಜೆಪಿ ಅಧಿಕಾರ ಕಿತ್ತುಕೊಂಡಿದೆ.

ಬಿಜೆಪಿ ಗುಜರಾತ್ ನಲ್ಲಿ ಶತಕಕ್ಕಿಂತ ಒಂದು ಸ್ಥಾನ ದೂರ ಉಳಿದು 99 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ 80 ಸ್ಥಾನ ಪಡೆದುಕೊಂಡು ಸುಧಾರಿಸಿಕೊಂಡಿದೆ.

2012ರಲ್ಲಿ 115 ಸ್ಥಾನ ಪಡೆದುಕೊಂಡಿದ್ದ ಬಿಜೆಪಿ ಈ ಸಲ 16 ಸ್ಥಾನ ಕಳೆದುಕೊಂಡಿದೆ. ಅದೇ ಕಾಂಗ್ರೆಸ್ 61 ಸ್ಥಾನ ಪಡೆದಿತ್ತು. ಈ ಚುನಾವಣೆಯಲ್ಲಿ 17 ಸ್ಥಾನ ಹೆಚ್ಚು ಗಳಿಸಿದೆ. ಆದರೆ ಮತಗಳಿಕೆಯಲ್ಲಿ 2012ಕ್ಕಿಂತ ಈ ಸಲ ಬಿಜೆಪಿಗೆ ಹೆಚ್ಚಾಗಿದೆ. 2012ರಲ್ಲಿ ಮತಗಳಿಕೆ ಶೇ, 47ರಷ್ಟಿತ್ತು. ಆದರೆ ಈ ಚುನಾವಣೆಯಲ್ಲಿ ಶೇ. 49.1ರಷ್ಟು ಮತ ಗಳಿಕೆ ಪಡೆದಿದೆ. ಅದೇ ಕಾಂಗ್ರೆಸ್ 2012ರಲ್ಲಿ ಶೇ.42ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್ 2017ರಲ್ಲಿ 41.1ರಷ್ಟು ಪಡೆದಿದೆ.

ಗ್ರಾಮೀಣ ಭಾಗದಲ್ಲಿ ಕೇಸರಿಗೆ ಹೊಡೆತ
ಗ್ರಾಮೀಣ ಭಾಗದಲ್ಲಿ ಬಿಜೆಪಿ 127 ಸ್ಥಾನಗಳಲ್ಲಿ 56 ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ 71 ಸ್ಥಾನಗಳಲ್ಲಿ ವಿಜಯಿಯಾಗಿದೆ. ಅದೇ ನಗರ ಪ್ರದೇಶಗಳಲ್ಲಿ ಒಟ್ಟು 55 ಸ್ಥಾನಗಳಲ್ಲಿ 43 ಸ್ಥಾನ ಗಳಿಸಿದೆ.

ಹಿಮಾಚಲದಲ್ಲಿ ಕೈ ಕಿತ್ತ ಬಿಜೆಪಿ
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿಕೊಂಡಿದೆ. ಬಿಜೆಪಿ 44 ಸ್ಥಾನ ಗೆದ್ದುಕೊಂಡರೆ ಆಡಳಿತರೂಢ ಕಾಂಗ್ರೆಸ್ 21 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಇತರರು ಮೂರು ಸ್ಥಾನ ಪಡೆದುಕೊಂಡರು.

ಮುಖ್ಯಮಂತ್ರಿ ಅಭ್ಯರ್ಥಿಗೆ ಸೋಲು
ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಂತಹ ಪ್ರೇಮ್ ಕುಮಾರ್ ಧಮಾಲ್ ಅವರು ಸುಜನ್ ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಾಜೇಂದ್ರ ಸಿಂಗ್ ರಾಣಾ ವಿರುದ್ಧ ಸೋಲುಂಡಿದ್ದಾರೆ.

ಪ್ರೇಮ್ ಕುಮಾರ್ ಧಮಾಲ್ ಅವರನ್ನು ಎರಡು ವಾರಕ್ಕೆ ಮೊದಲು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಧಮಾಲ್ ಸೋಲುಂಡಿರುವ ಕಾರಣ ಈಗ ಬಿಜೆಪಿಯ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ.

See also  ಜಪಾನ್ನಲ್ಲಿ ಕಂಪಿಸಿದ ಭೂಮಿ; 7.1ರಷ್ಟು ತೀವ್ರತೆ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು