ಹೈದರಾಬಾದ್: ಎರಡು ದಿನಗಳ ಹಿಂದೆ ಹೈದರಾಬಾದ್ ನಲ್ಲಿ ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ವೇಶ್ಯಾವಾಟಿಕೆ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಪಿಂಪ್ (ದಲ್ಲಾಳಿ) ಎಂಬಾತ ಆನ್ಲೈನ್ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ ಇವರ ಬಳಿ ಕಳುಹಿಸಿದ್ದನು ಎಂದು ತಿಳಿದು ಬಂದಿದೆ.ಇಬ್ಬರು ತೆಲುಗು ಮತ್ತು ಬಂಗಾಳಿ ಸಿನಿಮಾಗಳ ನಟಿಯರು. ಹೈದರಾಬಾದ್ ನ ತಾಜ್ ಡೆಕ್ಕನ್ ಹೋಟೆಲ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ವಿಚಾರ ತಿಳಿದ ಪೊಲೀಸರು ಐಪಿ ಅಡ್ರೆಸ್ ಮೂಲಕ ಪಿಂಪ್ ವಿಳಾಸವನ್ನು ಪತ್ತೆ ಹಚ್ಚಿ, ಸಿವಿಲ್ ಡ್ರೆಸ್ ನಲ್ಲಿ ಬಂದು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹೋಟೆಲ್ ನಲ್ಲಿ 50 ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೆಲವು ಕಾಂಡೋಮ್ ಗಳು ಪತ್ತೆಯಾಗಿವೆ.
ಬಂಧಿತರಲ್ಲಿ ಇಬ್ಬರು ನಟಿಯರು, ದಂಧೆಯ ಸಂಘಟಕ, ಮತ್ತೊಬ್ಬ ಬಾಲಿವುಡ್ ಸಿನಿಮಾ ನಿರ್ದೇಶಕ ಮೊನಿಶಾ ಕಾಡಕೈ, ಇನ್ನೊಬ್ಬ ಆಂಧ್ರ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೆಂಕಟ್ ರಾವ್ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ದಾಳಿ ವೇಳೆ ಹೋಟೆಲ್ ನ ಇಬ್ಬರೂ ಮ್ಯಾನೇಜರ್ ಗಳನ್ನು ಸಹ ಬಂಧಿಸಿದ್ದು, ಈ ವೇಳೆ ನಟಿಯರ ರೂಮಿಗೆ ಪುರುಷರನ್ನು ಕಳುಹಿಸುತ್ತಿದ್ದ ಪಿಂಪ್ ನಾಪತ್ತೆಯಾಗಿದ್ದಾನೆ.