News Kannada
Saturday, October 01 2022

ದೇಶ-ವಿದೇಶ

ಮುಂಬಯಿ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ರಸ್ತೆ ಅಪಘಾತ: ಮೂರು ಸಾವು - 1 min read

Photo Credit :

ಮುಂಬಯಿ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ರಸ್ತೆ ಅಪಘಾತ: ಮೂರು ಸಾವು

ಮುಂಬಯಿ: ಮುಂಬಯಿ-ಪುಣೆ ಎಕ್ಸ್ ಪ್ರೆಸ್ ವೇ ಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸಾವನ್ನಪ್ಪಿ, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ಖಾಲಪುರ ಟೋಲ್ ನಾಕ ಸಮೀಪ ಸಂಭವಿಸಿದೆ.

ಮುಂಬಯಿ ಲೇನ್ ನ ಈವೇಯಲ್ಲಿ ಕಾರೊಂದರ ಟಯರ್ ಸ್ಫೋಟಿಸಿದ ಪರಿಣಾಮ ಅದು ಮತ್ತೊಂದು ಬದಿಗೆ ಬಂದು ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಘಾಟ್ ಕೋಪರ್ ನ ಆನಂದ್ ನರೇಂದ್ರ ಪರೇಖ್(55), ಅಸ್ಮಿತ್ ತಾವ್ಡೆ(19) ಮತ್ತು ವಿಕ್ರೋಲಿಯ ಶುಭಂ ಬೋರ್ಡೆ ಎಂದು ಗುರುತಿಸಲಾಗಿದೆ.

ಖಾಲಪುರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ, 9 ಮಂದಿ ಪ್ರಯಾಣಿಕರಿದ್ದ ಇನೋವಾ ಕಾರು ಪುಣೆ ಕಡೆ ಸಾಗುತ್ತಿತ್ತು. ಆದರೆ ಅತೀ ವೇಗದಿಂದಾಗಿ ಕಾರಿನ ಟಯರ್ ಸ್ಫೋಟಗೊಂಡು ಕಾರು ನಿಯಂತ್ರಣ ಕಳೆದುಕೊಂಡು ಮತ್ತೊಂದು ಬದಿಗೆ ಬಂದು ಬಿದ್ದಿದೆ. ಈ ವೇಳೆ ರಿಟ್ಜ್ ಕಾರು ಇನೋವಾಗೆ ಬಡಿದಿದೆ. ರಿಟ್ಜ್ ಕಾರಿನ ಚಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬಯಿಯ ಮೊಹಮ್ಮದ್ ಯೂಸುಫ್ ಶಾಹ ಎನ್ನುವವರಿಗೆ ಸೇರಿದ ಕಾರು ಇದಾಗಿದೆ. ಈ ಕಾರು ಅಮ್ಯೂಸ್ಮೆಂಟ್ ಪಾರ್ಕ್ ಗೆ ತೆರಳುತ್ತಿತ್ತು.

See also  ಹೊಸ ಭಯೋತ್ಪಾದಕ ಸಂಘಟನೆಗೆ ಸೇರಿದ 2 ಭಯೋತ್ಪಾದಕರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು