News Kannada
Friday, September 30 2022

ದೇಶ-ವಿದೇಶ

ಜಾಧವ್ ಪತ್ನಿ ಮಂಗಳಸೂತ್ರ ತೆಗೆಸಿದ್ದ ಪಾಕಿ(ಪಿ)ಗಳು! - 1 min read

Photo Credit :

ಜಾಧವ್ ಪತ್ನಿ ಮಂಗಳಸೂತ್ರ ತೆಗೆಸಿದ್ದ ಪಾಕಿ(ಪಿ)ಗಳು!

ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಗೆ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡಿ ತಾನು ಮನವೀಯತೆ ಮೆರೆದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನದ ಅಸಲಿ ಬಣ್ಣ ಬಯಲಾಗಿದೆ.

ಪಾಕಿಸ್ತಾನ ಮತ್ತು ಭಾರತ ಭೇಟಿ ಬಗ್ಗೆ ಮಾಡಿಕೊಂಡಿರುವ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಜಾಧವ್ ಕುಟುಂಬದವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ಭೇಟಿಗೆ ಮೊದಲು ಎರಡು ರಾಷ್ಟ್ರಗಳು ರಾಜತಾಂತ್ರಿಕವಾಗಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಇದೆಲ್ಲವನ್ನೂ ಪಾಕಿಸ್ತಾನ ಉಲ್ಲಂಘಿಸಿದೆ. ಜಾಧವ್ ತಾಯಿ ಅವಂತಿ ಅವರಿಗೆ ತನ್ನ ಮಾತೃಭಾಷೆಯಲ್ಲಿ ಮಾತನಾಡುವ ಅವಕಾಶ ನೀಡಲಿಲ್ಲ. ಜಾಧವ್ ಪತ್ನಿಯ ಮಂಗಳಸೂತ್ರ ಮತ್ತು ಕುಂಕುಮವನ್ನು ತೆಗೆಸಿದ್ದರು ಎಂದು ರವೀಶ್ ಕುಮಾರ್ ಆರೋಪಿಸಿದ್ದಾರೆ.

ಪಾಕ್ ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ಭೇಟಿಯ ಬಳಿಕ ಜಾಧವ್ ಪತ್ನಿಯ ಚಪ್ಪಲಿಯನ್ನು ಕೂಡ ಮರಳಿಸಿಲ್ಲ ಎಂದರು.

See also  ಎನ್‌ಡಿಎಗೆ ಮತ್ತೊಂದು ಆಘಾತ– ಎಲ್‌ಕೆಪಿ ಸ್ವತಂತ್ರ ಸ್ಪರ್ಧೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು