ನವದೆಹಲಿ: ಸೋಮವಾರ ಸಂಜೆ ಭಾರತೀಯ ಸೇನೆಯ ‘ಘಾತಕ್’ ಕಮಾಂಡೊಗಳು ಸೋ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಪಾಕಿಸ್ತಾನದ ಮೂವರು ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್ ವಲಯದ ಪಾಕಿಸ್ತಾನ ಸೇನೆಯ ತಾತ್ಕಾಲಿಕ ಶಿಬಿರದ ಮೇಲೆ ನಡೆದ ದಾಳಿ ನಡೆಸಿದಾದ ಅಲ್ಲಿಂದ್ದ ಯೋಧ ಗಾಯಗೊಂಡಿದ್ದಾನೆ.
ಎಲ್ಒಸಿಯ ಒಳಗೆ 300 ಮೀಟರ್ ದೂರ ಸಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಪಾಕಿಸ್ತಾನದ ಗಡಿ ಕಾರ್ಯಪಡೆಯು ರಾಜೌರಿಯಲ್ಲಿ ಭಾರತದ ನಾಲ್ವರು ಯೋಧರನ್ನು ಹತ್ಯೆ ಮಾತ್ತು. ಅದರ ಪ್ರತೀಕಾರವಾಗಿ ಸೇನೆ ಈ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಹತ್ಯೆಗೀಡಾದ ಸೈನಿಕರು ಪಾಕಿಸ್ತಾನ ಸೇನೆಯ 12ನೇ ವಿಭಾಗದ ಬಲೂಚ್ ರೆಜಿಮೆಂಟ್ಗೆ ಸೇರಿದವರು ಎನ್ನಲಾಗಿದೆ.