News Kannada
Thursday, September 29 2022

ದೇಶ-ವಿದೇಶ

ಮದರಸಾದಲ್ಲಿ ಕೂಡಿ ಹಾಕಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ನಿರ್ವಾಹಕನ ಬಂಧನ - 1 min read

Photo Credit :

ಮದರಸಾದಲ್ಲಿ ಕೂಡಿ ಹಾಕಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ನಿರ್ವಾಹಕನ ಬಂಧನ

ಲಖನೌ: ಇಲ್ಲಿನ ಶಹದತ್ಗಂಜ್ನಲ್ಲಿನ ಮದರಸಾದಲ್ಲಿ 51ಮಂದಿ ಬಾಲಕಿಯರನ್ನು ಬಲವಂತವಾಗಿ ಕೂಡಿ ಹಾಕಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮದರಸಾದ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದು, 51 ಬಾಲಕಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಮದರಸಾದಲ್ಲಿ 125 ಮಂದಿ ಬಾಲಕಿಯರನ್ನು ನಿರ್ವಾಹಕ ಕೂಡಿ ಹಾಕಿದ್ದ. ಬಂಧನದಲ್ಲಿದ್ದ ಬಾಲಕಿಯರು ಮದರಸಾದಲ್ಲಿ ತಾವು ಅನುಭವಿಸುತ್ತಿರುವ ನೋವಿನ ಬಗ್ಗೆ ಹಾಳೆಯಲ್ಲಿ ಬರೆದು ಪಕ್ಕದ ಮನೆಯ ಕಡೆಗೆ ಬಿಸಾಕಿದ್ದಾರೆ. ಇದನ್ನು ಕಂಡ ಆ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಇದರಿಂದ ಈ ವಿಚಾರ ಬೆಳಕಿಗೆ ಬಂದಿದ್ದು, ನಿರ್ವಾಹಕನನ್ನು ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 51 ಬಾಲಕಿಯರನ್ನು ಲಕ್ನೋದ ಜಂಟಿ ಪೊಲೀಸ್ ಪಡೆ ರಕ್ಷಣೆ ಮಾಡಿದ್ದಾರೆ.

‘ದೂರು ದಾಖಲಾದ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಡೀ ತಂಡ ಮದರಸಾ ಮೇಲೆ ದಾಳಿ ನಡೆಸಿ 51 ಬಾಲಕಿಯರನ್ನು ರಕ್ಷಿಸಲಾಗಿದೆ. ಮದರಸಾ ನಿರ್ವಾಹಕನನ್ನು ಬಂಧಿಸಿ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

 

See also  ಮಹಾತ್ಮ ಗಾಂಧೀಜಿ ಪುಣ್ಯತಿಥಿ: ಪುಷ್ಪನಮನ ಸಲ್ಲಿಸಲಿರುವ ಮೋದಿ, ಪ್ರಣಬ್ ಮುಖರ್ಜಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು