News Kannada
Sunday, September 25 2022

ದೇಶ-ವಿದೇಶ

ಮೇವು ಹಗರಣ: ಲಾಲೂ ಪ್ರಸಾದ್ ಗೆ 3.5 ವರ್ಷ ಜೈಲು ಶಿಕ್ಷೆ - 1 min read

Photo Credit :

ಮೇವು ಹಗರಣ: ಲಾಲೂ ಪ್ರಸಾದ್ ಗೆ 3.5 ವರ್ಷ ಜೈಲು ಶಿಕ್ಷೆ

ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣದಲ್ಲಿ 3.5 ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ಹೇರಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ತೀರ್ಪು ನೀಡಿದ್ದಾರೆ.

1996ರಲ್ಲಿ ನಡೆದ ಬಹುಕೋಟಿ ರೂ. ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ದೋಷಿ ಎಂದು ಡಿ.23ರಂದು ಶಿವಪಾಲ್ ಸಿಂಗ್ ಅವರು ತೀರ್ಪು ನೀಡಿದ್ದರು.

ಇದರ ಬಳಿಕ 69ರ ಹರೆಯದ ಲಾಲೂ ಅವರನ್ನು ಬಿರ್ಸಾ ಮುಂಡಾದ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ. ತನ್ನ ಅನಾರೋಗ್ಯದ ಕಾರಣ ಕೋರ್ಟಿಗೆ ಹಾಜರಾಗದ ಲಾಲೂ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪನ್ನು ವೀಕ್ಷಿಸಿದರು.

ರಾಂಚಿ ಕೋರ್ಟ್ ಮೇವು ಹಗರಣದ ಯಾವೊಬ್ಬ ಆರೋಪಿಗೂ ಜಾಮೀನು ನೀಡಿಲ್ಲ. ಆರೋಪಿಗಳು ತಮ್ಮ ಜಾಮೀನಿಗಾಗಿ ಹೈಕೋರ್ಟ್ ಗೆ ಮನವಿ ಸಲ್ಲಿಸಬೇಕು.

See also  ನಕ್ಸಲರು ನಡೆಸಿದ ಬಾಂಬ್ ಸ್ಫೋಟಕ್ಕೆ ನಾಲ್ವರು ಯೋಧರು ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು