News Kannada
Tuesday, December 06 2022

ದೇಶ-ವಿದೇಶ

ಲಿಬಿಯಾದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ: 33ಮಂದಿ ಸಾವು, 50ಮಂದಿಗೆ ಗಾಯ

Photo Credit :

ಲಿಬಿಯಾದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ: 33ಮಂದಿ ಸಾವು, 50ಮಂದಿಗೆ ಗಾಯ

ಟ್ರಿಪೋಲಿ: ಮಂಗಳವಾರ ರಾತ್ರಿ ಲಿಬಿಯಾದ ಬೆಂಘಾಝಿ ಸಂಭವಿಸಿದ ಭೀಕರ ಅವಳಿ ಕಾರ್ ಬಾಂಬ್ ಸ್ಫೋಟದಲ್ಲಿ 33ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಬೆಂಘಾಝಿಯ ಆಲ್‌ ಸಲ್ಮಾನಿ ಜಿಲ್ಲೆಯಲ್ಲಿರುವ ಮಸೀದಿಯೊಂದರಲ್ಲಿ ರಾತ್ರಿ ಪಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ. ಇದಾದ ಕೆಲವೇ ನಿಮಿಷಗಳ ಬಳಿಕ ಇನ್ನೊಂದು ಬಾಂಬ್ ಸ್ಫೋಟ ಗೊಂಡಿದೆ. ಇನ್ನು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಪೈಕಿ ಲಿಬಿಯಾ ಮತ್ತು ಅಂತಾರಾಷ್ಟ್ರೀಯ ಶಾಂತಿಪಾಲನಾ ಪಡೆಯ ಸೈನಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಮಸೀದಿ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಮರ್ಸೀಡೀಸ್ ಕಾರುಗಳಲ್ಲಿ ಉಗ್ರರು ಬಾಂಬ್ ಅಡಗಿಸಿ ಸ್ಫೋಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಸ್ಫೋಟವಾದ ಬಳಿಕ ಅಲ್ಲಿನ ಜನರ ರಕ್ಷಣೆಗೆ ಬಂದ ಆ್ಯಂಬುಲೆನ್ಸ್ ಕೂಡ ಎರಡನೇ ಬಾಂಬ್ ಸ್ಪೋಟಕ್ಕೆ ಆಹುತಿಯಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನು ಹೆಚ್ಚಿದೆ. ಇನ್ನು ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪ್ರಸ್ತುತ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

See also  ಉಪ ಚುನಾವಣೆ ಫಲಿತಾಂಶ: ಬೆಳಗಾವಿ: ಬಿಜೆಪಿ ಮನ್ನಡೆ, ಮಂಗಲಾ ಅಂಗಡಿಗೆ 87468, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿಗೆ 83927 ಮತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು