News Kannada
Monday, December 05 2022

ದೇಶ-ವಿದೇಶ

ಮಗಳ ಮದುವೆಯಲ್ಲಿ ಗುಂಡು ಹಾರಿಸಿದ ತಂದೆ: ನೆರೆಮನೆಯ ಯುವತಿ ಸಾವು

Photo Credit :

ಮಗಳ ಮದುವೆಯಲ್ಲಿ ಗುಂಡು ಹಾರಿಸಿದ ತಂದೆ: ನೆರೆಮನೆಯ ಯುವತಿ ಸಾವು

ಚಂಡೀಗಢ: ಮಗಳ ವಿವಾಹದ ವೇಳೆ ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆಯ ಯುವತಿ ಬಲಿಯಾದ ಘಟನೆ ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ ನಡೆದಿದೆ.

22 ವರ್ಷದ ಸಾಕ್ಷಿ ಅರೋರಾ ಮೃತಪಟ್ಟ ಮಹಿಳೆ. ಹೋಶಿಯಾರ್ಪುರ್ ನಿವಾಸಿಯಾದ ಈಕೆ ಜಲಂದರ್ ನ ಕಾಲೇಜೊಂದರಲ್ಲಿ ಎಂಬಿಎಯನ್ನು ವ್ಯಾಸಂಗ ಮಾಡುತ್ತಿದ್ದರು.

ಹೋಶಿಯಾರ್ಪುರದ ಅಶೋಕ್ ಖೋಸ್ಲಾ ಎಂಬವರು ತನ್ನ ಮಗಳ ಮದುವೆ ಸಂಭ್ರಮದಲ್ಲಿ ಡಿಜೆ ಪಾರ್ಟಿ ಆಯೋಜಿಸಿದ್ದರು. ತಡರಾತ್ರಿ 11.30 ಗಂಟೆಯಾದರು ಪಾರ್ಟಿ ನಡೆಯುತ್ತಿದ್ದಾಗ ವಧುವಿನ ತಂದೆ ಗುಂಡೇಟು ಹಾರಿಸಿದ್ದಾರೆ. ಈ ವೇಳೆ ಸಾಕ್ಷಿ ಅರೋರಾ ತನ್ನ ಮನೆಯ ಮಹಡಿ ಮೇಲೆ ನಿಂತಿದ್ದರು. 

ಆ ಗುಂಡು ಬಂದು ಸಾಕ್ಷಿ ಅರೋರಾ ಹಣೆಗೆ ಹೊಕ್ಕಿದ್ದು, ಆಕೆ ತಕ್ಷಣವೇ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಇನ್ನೂ ಮದ್ಯದ ಅಮಲಿನಲ್ಲಿ ಅಶೋಕ್ ಖೋಸ್ಲಾ ಹಾಗೂ ಆತನ ಸ್ನೇಹಿತ ಅಶೋಕ್ ಸೇಥಿ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಶೋಕ್ ಖೋಸ್ಲಾನನ್ನು ಬಂಧಿಸಿ ಆತನಿಂದ ಲೈಸೆನ್ಸ್ ಹೊಂದಿದ್ದ 32 ಬೋರ್ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

 

See also  ಎಮ್ಮೆ ಕಳವು ಶಂಕೆ: ಗುಂಪು ದಾಳಿಯಲ್ಲಿ ಮೂವರು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು