News Kannada
Wednesday, October 05 2022

ದೇಶ-ವಿದೇಶ

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 5 ಜನ ಸೇರಿ 9 ಜನ ದುರ್ಮರಣ - 1 min read

Photo Credit :

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 5 ಜನ ಸೇರಿ 9 ಜನ ದುರ್ಮರಣ

ಹೈದರಾಬಾದ್: ಕ್ಯಾಬ್ ವೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಕಾರಿಗೆ ಅಪ್ಪಳಿಸಿದ ಪರಿಣಾಮ 9 ಜನ ಸಾವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ವಣಪರ್ತಿ ಜಿಲ್ಲೆಯ ಕೊತ್ತಕೋಟ ತಾಲ್ಲೂಕೊಮ ಕಣಿಮೆಟ್ಟ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಕರ್ನೂಲ್ ನಗರದಿದಂದ ಬರುತ್ತಿದ್ದ ಕ್ಯಾಬ್ ಕಣಿಮೆಟ್ಟ ಗ್ರಾಮದ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದು, ಎದುರುಗಡೆ ಬರುತ್ತಿದ್ದ ಕಾರಿಗೆ ಅಪ್ಪಳಿಸಿದೆ. ಇಬ್ಬರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಯಾಬ್ ನಲ್ಲಿ ಒಟ್ಟು 6 ಜನ ಪ್ರಯಾಣಿಸುತ್ತಿದ್ದರು. ಇನ್ನೊಂದು ವಾಹನದಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದೆ. ಮೃತರೆಲ್ಲರನ್ನೂ ಹೈದರಾಬಾದ್, ವಣಪರ್ತಿ ಮತ್ತು ಕರ್ನೂಲ್ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ.

ಕ್ಯಾಬ್ನಲ್ಲಿ ಇದ್ದವರನ್ನು ಅಜ್ಜಕೊಲ್ಲು ನಿವಾಸಿ ರಾಜು, ಮಸ್ತಪಿಯೂರ್ ನಿವಾಸಿ ಮಲ್ಲೇಶ್, ಬನ್ನಿಯ ನಿವಾಸಿಗಳಾದ ವೀರೇಶ್ ಹಾಗೂ ನರೇಶ್ ಎಂದು ಗುರುತಿಸಲಾಗಿದೆ. ಇನ್ನೊಂದು ವಾಹನದಲ್ಲಿದ್ದವರನ್ನು ಸೂರಿ ಬಾಬು, ಪತ್ನಿ ಸುನಿತಾ, ಮಗಳು ಪ್ರಸುನಾ ಮತ್ತು ಅತ್ತೆ ರಾಜೇಶ್ವರಿ ಎಂದು ಗುರುತಿಸಲಾಗುದೆ. ಇನ್ನೂ ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

See also  ಎಸಿ ಅನಿಲ ಸೋರಿಕೆಯಿಂದ ಮೂವರು ಮಲಗಿದ್ದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು