ಚೆನ್ನೈ: ಕಮಲ ಹಾಸನ್ ಮತ್ತು ನನ್ನ ಗುರಿ ಒಂದೇ. ಆದರೆ ದಾರಿ ಬೇರೆ ಬೇರೆ ಎಂದು ರಜನಿಕಾಂತ್ ಅವರು ಕಮಲಹಾಸನ್ ಹೊಸ ಪಕ್ಷದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಮಲ ಹಾಸನ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವುದು ಒಳ್ಳೆಯ ನಿರ್ಧಾರ. ಕಮಲ್ ಹಾಸನ್ ಕರೆದಿದ್ದ ಸಾರ್ವಜನಿಕ ಸಭೆ ಉತ್ತಮವಾಗಿತ್ತು. ಇದನ್ನು ನಾನು ಸಹ ವೀಕ್ಷಿಸಿದೆ.
ನಮ್ಮ ಗುರಿ ಒಂದೇ ಆಗಿದೆ. ಆದರೆ ದಾರಿ ಬೇರೆ ಬೇರೆ. ಒಟ್ಟಾರೆ ಜನರಿಗೆ ಒಳ್ಳೆಯದನ್ನು ಮಾಡುತ್ತೇವೆ ಎಂದು ರಜನಿ ಹೇಳಿದರು.
ಕಮಲ್ ಹಾಸನ್ ಅವರು ಬುಧವಾರ ಮಕ್ಕಳ್ ನೀದಿ ಮಯ್ಯಂ ಪಕ್ಷವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.