ಶ್ರೀನಗರ: ಭಾನುವಾರ ಬೆಳಗ್ಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ ದಾಳಿಗೆ ಒಂದೇ ಕುಟುಂಬದ ಐದು ಮಂದಿ ಬಲಿಯಾಗಿರುವ ಘಟನೆ ಜಮ್ಮುಕಾಶ್ಮೀರದ ಬಾಲಕೋಟ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದೆ ಎಂದು ಜಮ್ಮುಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್. ಪಿ. ವೇಯ್ಸ್ ತಿಳಿಸಿದ್ದಾರೆ.
ಶೆಲ್ ದಾಳಿಯಲ್ಲಿ ಚೌಧರಿ ರಂಜಾಣ್ ಮಾಲ್ಯ ದಂಪತಿ ಹಾಗು ಅವರು ಮೂವರು ಮಕ್ಕಳು ಬಲಿಯಾಗಿದ್ದಾರೆ. ಇದೇ ವೇಳೆ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಹೆಣ್ಣು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಸುಮಾರು 7.45ರ ಸುಮಾರಿಗೆ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆಯು ದಾಳಿ ಮಾಡಿದೆ.
ಪಾಕಿಸ್ತಾನವು ತನ್ನ ದೇಶದ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗೆ ಕಿರುಕುಳ ನೀಡುಲಾಗುತ್ತಿದೆ ಎಂದು ಆರೋಪಿಸಿದ ಬಳಿಕ ನಡೆದ ದಾಳಿ ಇದಾಗಿದೆ.