ನವದೆಹಲಿ: ಮಥುರಾ ಬಳಿಯಿರುವ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಕಾರಿಗೆ ಕಂಟೈನರ್ ಗುದ್ದಿದ ಪರಿಣಾಮ ನಾಲ್ಕು ಮಂದಿ ವೈದ್ಯರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ.
ತಮ್ಮ ಸಹೋದ್ಯೋಗಿಯೊಬ್ಬರ ಜನ್ಮದಿನದ ಸಮಾರಂಭದಲ್ಲಿ ಭಾಗಿಯಾಗಲು ಆಗ್ರಾಕ್ಕೆ ತೆರಳುತ್ತಿದ್ದ ಏಮ್ಸ್ ನ ವೈದ್ಯರು ಪ್ರಯಾಣಿಸುತ್ತಿದ್ದ ಕಾರಿಗೆ ಕಂಟೈನರ್ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ಇತರ ಮೂವರು ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ.
ಎಐಐಎಂಎಸ್ ವೈದ್ಯರಾದ ಡಾ.ಯಶ್ ಪಾಲ್, ಡಾ. ಹರ್ಷದ್ ಮತ್ತು ಡಾ. ಹೆಂಬಾಲ ಎಂಬವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಮೃತರಾದ ಡಾ. ಹರ್ಷದ್ ಹುಟ್ಟುಹಬ್ಬಕ್ಕೆ ಇವರೆಲ್ಲರೂ ತೆರಳುತ್ತಿದ್ದರು ಎಂದು ವರದಿಗಳು ತಿಳಿಸಿವೆ.