ಚೆನ್ನೈ: ಈಗ ಜೈಲಿನಲ್ಲಿರುವ ತಮಿಳುನಾಡು ಎಐಡಿಎಂಕೆ ಪಕ್ಷದ ನಾಯಕಿ ವಿ.ಕೆ. ಶಶಿಕಲಾ ಅವರ ಪತಿ ಎಮ್. ನಟರಾಜನ್ ತೀವ್ರ ಎದೆನೋವಿಗೆ ಒಳಗಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ,
ಮಾ.16ರಂದು ನಟರಾಜನ್ ಅವರನ್ನು ಗ್ಲೇನಿಗಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನೀಗ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಕಳೆದ ಅಕ್ಟೋಬರ್ ನಲ್ಲಿ 74ರ ಹರೆಯದ ನಟರಾಜನ್ ಲಿವರ್ ಮತ್ತು ಕಿಡ್ನಿ ಕಸಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಟರಾಜನ್ ಪತ್ನಿ ಶಶಿಕಲಾ ಈಗ ಬೆಂಗಳೂರು ಜೈಲಿನಲ್ಲಿದ್ದಾರೆ.