News Kannada
Wednesday, December 07 2022

ದೇಶ-ವಿದೇಶ

ಉಪವಾಸ ಸತ್ಯಾಗ್ರಹಕ್ಕೆ ಮೊದಲು ಹೊಟ್ಟೆತುಂಬ ತಿಂದ ಕಾಂಗ್ರೆಸ್ ನಾಯಕರು!?

Photo Credit :

ಉಪವಾಸ ಸತ್ಯಾಗ್ರಹಕ್ಕೆ ಮೊದಲು ಹೊಟ್ಟೆತುಂಬ ತಿಂದ ಕಾಂಗ್ರೆಸ್ ನಾಯಕರು!?

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಇಂದು ರಾಜ್ ಘಾಟ್ ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಆದರೆ ಈ ಉಪವಾಸ ಸತ್ಯಾಗ್ರಹಕ್ಕೆ ಮೊದಲು ಕಾಂಗ್ರೆಸ್ ನವರು ಹೊಟ್ಟೆ ತುಂಬಾ ತಿಂದು ಬಂದಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಫೋಟೊ ಸಹಿತ ಟ್ವೀಟ್ ಮಾಡಿದ್ದಾರೆ.

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ರಾಹುಲ್ ಗಾಂದಿ ನೇತೃತ್ವದಲ್ಲಿ ಉಪವಾಸ ನಡೆಸುತ್ತಲಿದೆ. ಆದರೆ ಕಾಂಗ್ರೆಸ್ ನಾಯಕರಾದ ಅಜಯ್ ಮಕೇನ್, ಹರೂನ್ ಯೂಸುಫ್ ಮತ್ತು ಅರವಿಂದ್ ಸಿಂಗ್ ಲವ್ಲಿ ಅವರು ಉಪವಾಸಕ್ಕೆ ಮೊದಲು ಹೋಟೆಲ್ ನಲ್ಲಿ ಹೊಟ್ಟೆ ತುಂಬಾ ತಿನ್ನುತ್ತಿರುವಂತಹ ಫೋಟೊವನ್ನು ಬಿಜೆಪಿಯ ನಾಯಕ ಹರೀಶ್ ಖುರಾನ ಟ್ವೀಟ್ ಮಾಡಿದ್ದಾರೆ.

ರಾಜ್ ಘಾಟ್ ನಲ್ಲಿ ಉಪವಾಸ ಮಾಡುವಂತೆ ಕಾಂಗ್ರೆಸ್ಸಿಗರು ಬೇರೆಯವರನ್ನು ಕರೆಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಹೋಟೆಲ್ ನಲ್ಲಿ ಛೋಲೆ ಬಟೂರೆ ತಿನ್ನುತ್ತಿದ್ದಾರೆ ಎಂದು ಫೋಟೊ ಸಹಿತ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಲವ್ಲಿ ಅವರು, 8-30ಕ್ಕೆ ಈ ಫೋಟೊ ತೆಗೆಯಲಾಗಿದೆ. ಉಪವಾಸವು ಬೆಳಗ್ಗೆ 10-30ರಿಂದ ಸಂಜೆ 4.30ರ ತನಕ ಸಾಂಕೇತಿಕವಾಗಿ ಮಾಡಲಾಗುತ್ತಿದೆ ಎಂದು ರೀಟ್ವೀಟ್ ಮಾಡಿದ್ದಾರೆ.

See also  ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಬಾಂಗ್ಲಾದೇಶದ ಟಿಕ್ ಟೋಕರ್ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು