News Kannada
Friday, December 02 2022

ದೇಶ-ವಿದೇಶ

ಪತ್ರಕರ್ತೆ ಜ್ಯೋತಿರ್ಮಯ್ ಡೇ ಕೊಲೆ ಪ್ರಕರಣ: ಛೋಟರಾಜನ್ ಸೇರಿ 9 ಮಂದಿ ಅಪರಾಧಿಗಳು

Photo Credit :

ಪತ್ರಕರ್ತೆ ಜ್ಯೋತಿರ್ಮಯ್ ಡೇ ಕೊಲೆ ಪ್ರಕರಣ: ಛೋಟರಾಜನ್ ಸೇರಿ 9 ಮಂದಿ ಅಪರಾಧಿಗಳು

ಮುಂಬೈ: ಬುಧವಾರ ಮುಂಬೈ ವಿಶೇಷ ನ್ಯಾಯಾಲಯವು ಪತ್ರಕರ್ತ ಜ್ಯೋತಿರ್ಮಯ್ ಡೇ ಕೊಲೆ ಪ್ರಕರಣದಲ್ಲಿ ಭೂಗತ ಪಾತಿ ಛೋಟಾರಾಜನ್ ಮತ್ತು ಇತರ ಒಂಭತ್ತು ಮಂದಿಯನ್ನು ಅಪರಾಧಿಗಳು ಎಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಏಷ್ಯನ್‌ ಏಜ್‌ ಪತ್ರಿಕೆಯ ವರದಿಗಾರ್ತಿ ಜಿಗ್ನಾ ವೋರಾ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.

ಜೂನ್ 11, 2011ರಂದು ‘ಮಿಡ್‌ ಡೇ’ ಪತ್ರಿಕೆಯ ತನಿಖಾ ವರದಿ ವಿಭಾಗದ ಸಂಪಾದಕರಾಗಿದ್ದ ಜ್ಯೋತಿರ್ಮಯ್ ಡೇ ಅವರನ್ನು ಪಾವೈ ನಿವಾಸದ ಎದುರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು.

ಈ ಪ್ರಕರಣ ಸಂಬಂಧ ನ.25, 2011ರಲ್ಲಿ ‘ಏಷ್ಯನ್‌ ಏಜ್’ ಪತ್ರಿಕೆಯ ಮುಂಬೈ ಬ್ಯೂರೊ ಉಪಮುಖ್ಯಸ್ಥರಾಗಿದ್ದ ಜಿಗ್ನಾ ವೋರಾ ಅವರನ್ನು ಬಂಧಿಸಲಾಗಿತ್ತು.

 

 

See also  ಪ್ರಧಾನಿ ನರೇಂದ್ರ ಮೋದಿ ಈ ತಿಂಗಳಲ್ಲಿ ಅಮೇರಿಕಾ ಭೇಟಿ ಸಾಧ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು