News Kannada
Tuesday, October 04 2022

ದೇಶ-ವಿದೇಶ

ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಹಗರಣ? - 1 min read

Photo Credit :

ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಹಗರಣ?

ಮುಂಬಯಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯ(ಇಡಿ)ವು ಸಮನ್ಸ್ ಜಾರಿಗೊಳಿಸಿದೆ.

ಇಡಿ ತನಿಖೆ ನಡೆಸುತ್ತಿರುವಂತಹ 2000 ಕೋಟಿ ರೂಪಾಯಿ ಬಿಟ್ ಕಾಯಿನ್ ಹಗರಣದ ಬಗ್ಗೆ ಕುಂದ್ರಾ ವಿಚಾರಣೆ ನಡೆಸಲಾಗುವುದು. ಈ ಹಗರಣದಲ್ಲಿ ಆರೋಪಿಯಾಗಿರುವ ಅಮಿತ್ ಭಾರದ್ವಾಜ್ ಎಂಬಾತ ವಿಚಾರಣೆ ವೇಳೆ ಕುಂದ್ರಾ ಹೆಸರು ಹೇಳಿದ ಹಿನ್ನೆಲೆಯಲ್ಲಿ ಇಡಿ ಸಮನ್ಸ್ ಜಾರಿ ಮಾಡಿದೆ.

ದಿನಕ್ಕೆ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬಿಟ್ ಕಾಯಿನ್ ವ್ಯವಹಾರ ಮಾಡುತ್ತಿರುವವರಿಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ಜಾರಿ ಮಾಡಿದೆ. ಈ ಹೆಸರುಗಳನ್ನು ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಬಗ್ಗೆ ತನಿಖೆ ನಡೆಯುತ್ತಿದೆ. ಬಾಲಿವುಡ್ ನ ಕೆಲವು ಪ್ರಮುಖ ಸೆಲೆಬ್ರಿಟಿಗಳ ಸಹಿತ ಹಲವಾರು ಮಂದಿಯ ಹೆಸರು ಇದರಲ್ಲಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟಿರುವ ರಾಜ್ ಕುಂದ್ರಾಗೆ ಕ್ರಿಕೆಟ್ ಸಂಬಂಧಿಸಿದ ಚಟುವಟಿಕೆಗಳಿಂದ ಅಜೀವ ನಿಷೇಧ ಹೇರಲಾಗಿದೆ.

ಬಿಟ್ ಕಾಯಿನ್ ಎಂದರೇನು?
ಬಿಟ್ ಕಾಯಿನ್ ಡಿಜಿಟಲ್ ರೂಪದಲ್ಲಿರುವಂತಹ ಕರೆನ್ಸಿ. ಇದನ್ನು ನೋಟು ಮುದ್ರಿಸಿದಂತೆ ಮುದ್ರಿಸುವುದಿಲ್ಲ. ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಇರುವುದು. ಯುರೋ, ಡಾಲರ್ ಅಥವಾ ರೂಪಾಯಿಯಂತೆ ಇದು ಭೌತಿಕ ರೂಪದಲ್ಲಿ ಇರುವುದಿಲ್ಲ. ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಫ್ಟ್ ವೇರ್ ಮೂಲಕ ಇದನ್ನು ಸೃಷ್ಟಿಸಲಾಗುತ್ತದೆ. ಈ ತಂತ್ರಾಂಶದಲ್ಲಿ ಉಪಯೋಗಿಸುವ ಕೋಡ್ ಅನ್ನು ಮುಕ್ತವಾಗಿ ಸಾರ್ವಜನಿಕರಿಗೆ ತೆರೆದಿಡಲಾಗಿದೆ.

See also  ಅಯೋದ್ಯೆ ತೀರ್ಪು: ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಕೈ-ಕಮಲ ನಾಯಕರು ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು