ಹೈದರಾಬಾದ್: ತಾಳಿಕಟ್ಟಿದ ಕ್ಷಣದಲ್ಲೇ ವಧು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವಂತಹ ದುರಂತ ಘಟನೆಯು ತೆಲಂಗಾಣದಲ್ಲಿ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.
ವರನು ವಧುವಿನ ಕುತ್ತಿಗೆಗೆ ತಾಳಿ ಕಟ್ಟಿದ ಮರುಕ್ಷಣದಲ್ಲೇ ವಧು ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾಳೆ ಎಂದು ವರದಿಗಳು ತಿಳಿಸಿವೆ.
ಮೃತ ವಧುವನ್ನು ಕೊಂಡಿ ನಿರಂಜನಮ್ಮ ಅಲಿಯಾಸ್ ಲಕ್ಷ್ಮಿ ಎಂದು ಗುರುತಿಸಲಾಗಿದೆ. ವರ ವೆಂಕಟೇಶ್ ತಾಳಿ ಕಟ್ಟಿದ ಕೂಡಲೇ ವಧು ಕುಸಿದುಬಿದ್ದು ಮೃತಪಟ್ಟಿದ್ದಾಳೆ. ಘಟನೆಯು ತೆಲಂಗಾಣದ ಕರ್ನೂಲ್ ಜಿಲ್ಲೆಯ ಅಚಾಮ್ ಪೆಟ್ ನಲ್ಲಿ ನಡೆದಿದೆ.
ವಧುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮದುವೆ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.