ಬಂದಾ: ಪತ್ನಿ ಮಾಡಿದ ರೊಟ್ಟಿ ಸೀದು ಹೋಗಿದ್ದಕ್ಕೆ ಪತಿ ತ್ರಿವಳಿ ತಲಾಖೆ ನೀಡಿ, ಮನೆ ಬಿಟ್ಟು ಹೋಗುವಂತೆ ಪತ್ನಿಯನ್ನು ಹೇಳಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಕುರಿತಂತೆ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.
ಮಹೋಬಾ ಜಿಲ್ಲೆಯ ಪಹರೆಥಾ ಗ್ರಾಮದಲ್ಲಿ 24 ವರ್ಷದ ಮಹಿಳೆ ನೀಡಿದ ದೂರಿ ದೌರ್ಜನ್ಯ ಕಾಯ್ದೆಯಡಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಬನ್ಸ್ರಾಜ್ ಯಾದವ್ ತಿಳಿಸಿದ್ದಾರೆ.
‘ತ್ರಿವಳಿ ತಲಾಖ್ ನೀಡುವ ಮೂರು ದಿನಗಳ ಮುನ್ನ, ಸಿಗರೇಟ್ನಿಂದ ಸುಟ್ಟು ಮಹಿಳೆಯನ್ನು ಆಕೆಯ ಪತಿ ಗಾಯಗೊಳಿಸಿದ್ದಾನೆ’ ಎಂದೂ ಪೊಲೀಸರು ತಿಳಿಸಿದ್ದಾರೆ.