ವಿದಿಷಾ: ಹದಿನಾಲ್ಕು ತಿಂಗಳ ಮಗುವಿನ ಮೇಲೆ ಅಜ್ಜನೆ (ತಂದೆಯ ಮಾವ) ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶ ವಿದಿಷಾ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಗಜರಾಜ್ ಸಿಂಗ್ ಭಿಲ್ ಮೊಮ್ಮಗಳ ಜತೆ ಆಡುವ ನೆಪವೊಡ್ಡಿ ತಮ್ಮ ಅಳಿಯನ ಮನೆಗೆ ಹೋಗಿದ್ದ. ನಂತರ ಮಗುವನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು, ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಗಜರಾಜ್ ತಮ್ಮ ಸಹೋದರನೊಬ್ಬನ ಜತೆ ಬಾಲಕಿಯನ್ನು ಮನೆಗೆ ವಾಪಾಸ್ ಕಳುಹಿಸಿದ್ದಾನೆ.
ಈ ವೇಳೆ ಮಗು ನೋವಿನಿಂದ ಅಳುತ್ತಿತ್ತು. ತಾಯಿ ಮಗುವನ್ನು ವಿಚಾರಿಸಿದಾಗ ಗುಪ್ತಾಂಗದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಕೂಡಲೇ ಮಗುವನ್ನು ಸಿರೋಂಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆದಿರುವುದನ್ನು ದೃಢಪಡಿಸಿದರು. ಆರೋಪಿ ತಲೆಮರೆಸಿಕೊಂಡಿದ್ದು, ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಲತೇರಿ ಪೊಲೀಸ್ ಠಾಣೆ ಅಧಿಕಾರಿ ಬನ್ವಾರಿಲಾಲ್ ಮಾಳವೀಯ ಹೇಳಿದ್ದಾರೆ.