ವಾಷಿಂಗ್ಟನ್: ಅಮೆರಿಕಾದ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಲ್ಲಿ ಸಲಾಡ್ ತಿಂದ ಸುಮಾರು 10 ರಾಜ್ಯದ 163 ಮಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಂಟೇಶನ್(ಸಿಡಿಸಿ) ತನಿಖೆ ಆರಂಭಿಸಿದೆ.
ಅಮೆರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(ಎಫ್ ಡಿಎ), ಸಿಡಿಸಿ ಮತ್ತು ಸ್ಥಳೀಯ ಅಧಿಕಾರಿಗಳು ಜತೆ ಸೇರಿ ಮೆಕ್ ಡೊನಾಲ್ಡ್ ನಲ್ಲಿ ತನಿಖೆ ನಡೆಸುತ್ತಿದ್ದಾರೆ.
ಮೆಕ್ ಡೊನಾಲ್ಡ್ ಸಲಾಡ್ ನಲ್ಲಿ ಬಳಸಿದ ಯಾವ ಸಾಮಗ್ರಿಯಿಂದಾಗಿ ಜನರು ಅಸ್ವಸ್ಥರಾಗುತ್ತಿದ್ದಾರೆ ಎಂದು ತಿಳಿಯಲು ತನಿಖೆ ಆರಂಭಿಸಲಾಗಿದೆ.