ಚೆನ್ನೈ: ಡಿಎಂಕೆ ಪಕ್ಷದ ಮುಖ್ಯಸ್ಥರಾಗಿರುವ ಕರುಣಾನಿಧಿ ಅನಾರೋಗ್ಯದ ಸುದ್ದಿ ಕೇಳಿ ಆಘಾತದಿಂದ ಸುಮಾರು 21 ಮಂದಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
ಕರುಣಾನಿಧಿ ಅವರ ಬಗ್ಗೆ ವೈದ್ಯರ ಒಂದು ತಂಡವು ನಿರಂತರವಾಗಿ ನಿಗಾ ವಹಿಸಿದೆ. ಅವರ ಆರೋಗ್ಯವು ಸಹಜ ಸ್ಥಿತಿಗೆ ಬರುತ್ತಿದೆ ಎಂದು ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಕರುಣಾನಿಧಿ ಆರೋಗ್ಯ ವಿಚಾರಿಸಿ ಮರಳಿದ ಸ್ಟಾಲಿನ್ ಹೇಳಿದ್ದಾರೆ.
ಕರುಣಾನಿಧಿ ಅನಾರೋಗ್ಯಕ್ಕೆ ಒಳಗಾಗಿರುವ ಬಗ್ಗೆ ಆಘಾತಗೊಂಡು ಸುಮಾರು 21 ಮಂದಿ ಕಾರ್ಯಕರ್ತರು ಸಾವಿಗೀಡಾಗಿರುವುದು ತುಂಬಾ ನೋವು ತಂದಿದೆ. ಜನರು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.