News Kannada
Friday, December 02 2022

ದೇಶ-ವಿದೇಶ

ಕೇರಳದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ನಿಗೂಢ ಸಾವು

Photo Credit :

ಕೇರಳದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ನಿಗೂಢ ಸಾವು

ತಿರುವನಂತಪುರಂ: ಒಂದೇ ಕುಟುಂಬದ ನಾಲ್ಕು ಮಂದಿಯು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯು ಕೇರಳದ ಇದುಕ್ಕಿಯಲ್ಲಿ ನಡೆದಿದೆ.

ಇದುಕ್ಕಿಯ ಕುಟುಂಬವೊಂದರ ನಾಲ್ಕು ಸದಸ್ಯರ ಶವಗಳು ಮನೆ ಹಿಂಭಾಗದ ರಬ್ಬರ್ ತೋಟದ ಗುಂಡಿಯಲ್ಲಿ ಒಂದರ ಮೇಲೆ ಒಂದರಂತೆ ಕಂಡುಬಂದಿದೆ. ಈ ಸಾವಿನ ಬಗ್ಗೆ ಇನ್ನೂ ನಿಗೂಢತೆ ಆವರಿಸಿಕೊಂಡಿದೆ.

ಕೃಷ್ಣನ್, ಅವರ ಪತ್ನಿ ಸುಶೀಲಾ, ಮಕ್ಕಳಾದ ಆರ್ಷಾ ಮತ್ತು ಅರ್ಜುನ್ ಸಾವನ್ನಪ್ಪಿದವರು ಎಂದು ತಿಳಿದುಬದಂದಿದೆ.

ಎರಡು ದಿನಗಳಿಂದ ಈ ಕುಟುಂಬವು ನಾಪತ್ತೆಯಾಗಿತ್ತು. ಸಂಶಯದ ಮೇಲೆ ನೆರೆಮನೆಯವರು ಮತ್ತು ಸಂಬಂಧಿಕರೊಬ್ಬರು ಹುಡುಕಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯಲ್ಲಿ ರಕ್ತದ ಕಲೆಗಳನ್ನು ನೋಡಿದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ರಬ್ಬರ್ ತೋಟದ ಮಣ್ಣುಮುಚ್ಚಿದ ಗುಂಡಿಯಲ್ಲಿ ನಾಲ್ವರ ಶವ ಪತ್ತೆಯಾಗಿದೆ. ದೇಹದ ಮೇಲೆ ಸುತ್ತಿಗೆಯಿಂದ ಹೊಡೆದ ಕಲೆಗಳಿವೆ. ಮನೆ ಯಜಮಾನ ಕೃಷ್ಣನ್ ಮಾಟಮಂತ್ರಗಳನ್ನು ಮಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೃತದೇಹಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಡಲಾಗಿದೆ.

See also  ತನ್ನ ಮಗಳ ಮೇಲೆಯೇ 6 ತಿಂಗ್ಳಿನಿಂದ ನಿರಂತರ ಅತ್ಯಾಚಾರ ಎಸಗಿದ ತಂದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು