ನವದೆಹಲಿ: ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿದ್ದ ಕೇರಳ ಹೌಸ್ ಗೆ ಚಾಕು ಹಿಡಿದುಕೊಂಡು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಯುವಕನೊಬ್ಬನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಕೇರಳ ಹೌಸ್ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ವೇಳೆ ಯುವಕ ಬೊಬ್ಬೆ ಹಾಕಿದ್ದು, ಆತನ ಕೈಯೊಳಗೆ ಚಾಕು ಇತ್ತು. ಆತನನ್ನು ತಕ್ಷಣ ಭದ್ರತಾ ಸಿಬ್ಬಂದಿ ಹಿಡಿದುಕೊಂಡರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವಕ ಮಾನಸಿಕ ಸಮತೋಲನವನ್ನು ಕಳಕೊಂಡಿದ್ದ ಮತ್ತು ಆತನನ್ನು ಇನ್ ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆ್ಯಂಡ್ ಅಲೈಡ್ ಸೈನ್ಸ್ ಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.