ಭೋಪಾಲ್: ಆನೆಗಳಿಗೆ ರಿಲಾಕ್ಸ್ ಮೂಡ್ ನ್ನು ಬರಿಸಲು ಮಧ್ಯಪ್ರದೇಶದಲ್ಲಿ 7 ದಿನಗಳ ಪಿಕ್ ನಿಕ್ ನ್ನು ಹಮ್ಮಿಕೊಳ್ಳಲಾಗಿದೆ. ಮನುಷ್ಯರಂತೆ ಪ್ರಾಣಿಗಳಿಗೂ ಪಿಕ್ ನಿಕ್ ಎಂದರೆ ಬಲು ಇಷ್ಟವಂತೆ.
ಹಾಗಾಗಿ ಅರಣ್ಯಾಧಿಕಾರಿಗಳು ಕಾನ್ಹಾ ನ್ಯಾಷನಲ್ ಪಾರ್ಕ್ನಲ್ಲಿ ಆನೆಗಳಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಜತೆಯಾಗಿ ಕಾಲ ಕಳೆಯಲು ಏಳು ದಿನಗಳ ಈ ಪಿಕ್ನಿಕ್ ಆಯೋಜಿಸಿದೆ. ಇನ್ನೂ ಪಿಕ್ ನಿಕ್ ವಿಶೇಷತೆಯೇನೆಂದರೆ ಸುತ್ತಲಿನ ಜಾಗದಲ್ಲಿ ವಿರಾಮ ಹಾಗೂ ಭರ್ಜರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಅದಲ್ಲದೆ ಒಂದು ವಾರ ಆನೆಗಳ ತಲೆ ಮತ್ತು ದೇಹಕ್ಕೆ ಮಸಾಜ್ ಹಾಗೂ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ.