ಬೆಂಗಳೂರು: ಕೇರಳದ ಸಾಕ್ಷರತಾ ಮಿಷನ್ ಅಕ್ಷರಲಕ್ಷಂ ಎಂಬ ಯೋಜನೆಯಡಿಯಲ್ಲಿ ೯೬ವರ್ಷದ ಅಜ್ಜಿಯೊಬ್ಬರು 4ನೇ ತರಗತಿ ತತ್ಸಮಾನ ಪರೀಕ್ಷೆ ಬರೆದು ಅಚ್ಚರಿಯನ್ನು ಮಡಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಕಳೆದ ಭಾನುವಾರ ಆಲಪ್ಪುಳ ಜಿಲ್ಲೆಯ ಕಾರ್ತ್ಯಾಯಿನಿ ಅಮ್ಮ ಎಂಬವರು ಪರೀಕ್ಷೆ ಬರೆದಿದ್ದರು. ಇವರು ಪರೀಕ್ಷೆ ಬರೆಯುತ್ತಿರುವ ಚಿತ್ರವನ್ನು ವಿನೋದ್ ರೆಡ್ಡಿ ಎಂಬವರು ಟ್ವೀಟ್ ಮಾಡಿ ಖ್ಯಾಥ ಉದ್ಯಮಿ ಆನಂದ್ ಮಹೀಂದ್ರ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರ ಅವರು ಸುದ್ದಿ ನಿಜವಾಗಿದ್ದರೆ ಈಕೆ ನನ್ನ ಸ್ಫೂರ್ತಿ ಎಂದು ಹೇಳಿದ್ದಾರೆ.