ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಧ್ವಜಾರೋಹಣ ಮಾಡುತ್ತಿರುವ ವೇಳೆ ರಾಷ್ಟ್ರಧ್ವಜವು ಕೆಳಗೆ ಬಿದ್ದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಧ್ವಜಾರೋಹಣ ಮಾಡಲು ಅಮಿತ್ ಶಾ ಅವರು ಹಗ್ಗವನ್ನು ಎಳೆದಾಗ ಧ್ವಜವು ಕೆಳಮುಖವಾಗಿ ಬಂದು ಧ್ವಸ್ತಂಭದ ಬುಡಕ್ಕೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಅವರು ಮತ್ತೊಂದು ಹಗ್ಗವನ್ನು ಎತ್ತಿ ಧ್ವಜಾರೋಹಣ ಮಾಡಿದ್ದಾರೆ.
ಆದರೆ ಇದರ ವಿಡಿಯೋವು ಈಗ ವೈರಲ್ ಆಗಿದ್ದು, ಸಾಮಾಜಿಕಜಾಲತಾಣಗಳಲ್ಲಿ ಕೆಲವರು ಇದನ್ನು ಟೀಕಿಸಿದ್ದಾರೆ.