ಹೈದರಾಬಾದ್: ಕಾನೂನುಬಾಹಿರವಾಗಿ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರನ್ನು ಬಂಧಿಸಿದ್ದಕ್ಕೆ ಐಎಎಸ್ ಅಧಿಕಾರಿ ಕೆ.ಶಿವಕುಮಾರ್ ನಾಯ್ಡು ಅವರಿಗೆ ಹೈದರಾಬಾದ್ ಹೈಕೋರ್ಟ್ 1 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಶುಕ್ರವಾರ ನ್ಯಾಯಮೂರ್ತಿ ಪಿ. ನವೀನ್ ರಾವ್ ನೇತೃತ್ವದ ಪೀಠ ವಿಚಾರಣೆ ನಡೆಸಿ ಅಧಿಕಾರಿಗೆ ರೂ 2000 ದಂಡ ವಿಧಿಸಿ, ದೂರುದಾರರಿಗೆ ₹50 ಸಾವಿರ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ. ಕೊಡುವಂತೆ ತೆಲಂಗಾಣ ಸರ್ಕಾರಕ್ಕೆ ಆದೇಶಿಸಿದೆ.
ಘಟನೆ ಹಿನ್ನೆಲೆ. ನಿವೃತ್ತ ಸರ್ಕಾರಿ ಉದ್ಯೋಗಿಯಾದ ಎ. ಬುಚ್ಚಯ್ಯ ಅವರು ಮೆಹಬೂಬ್ ನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಮುಂದಾಗಿದ್ದ ವೇಳೆ ಕೆಲವು ಸ್ಥಳೀಯರು ಜಂಟಿ ಆಯುಕ್ತ ಶಿವಕುಮಾರ್ ನಾಯ್ಡು ಅವರಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ 2017ರಂದು ಜುಲೈ 1ರಂದು ಆಯುಕ್ತ ಕಾಮಗಾರಿಗೆ ತಡೆಯಾಜ್ಞೆ ನೀಡಿ, ಬುಚ್ಚಯ್ಯ ಅವರನ್ನು 2 ತಿಂಗಳಿಗೂ ಹೆಚ್ಚು ದಿನ ಬಂಧಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ.
ಜಾಮೀನು ಮುಖಾಂತರ ಹೊರಗಡೆ ಬಂದ ಬುಚ್ಚಯ್ಯ ಆಯುಕ್ತರ ನಡೆ ವಿರೋಧಿಸಿ ನ್ಯಾಯಕ್ಕಾಗಿ ಕೈಕೋರ್ಟ್ ಮೆಟ್ಟಿಲೇರಿದ್ದಾರೆ.