ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆರ್ ಆರ್ ಎಸ್ ಆಯೋಜಿಸುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾರ್ಯಕ್ರಮಕ್ಕೆ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ಕೂಡ ಆಹ್ವಾನಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಮುಸ್ಲಿಂನ ಮೂಲಭೂತವಾದಿ ಸಂಘಟನೆ ಮತ್ತು ಆರ್ ಎಸ್ ಎಸ್ ಒಂದೇ ಎಂದು ರಾಹುಲ್ ಇತ್ತೀಚೆಗೆ ತಮ್ಮ ವಿದೇಶಿ ಪ್ರವಾಸದಲ್ಲಿ ಹೇಳಿದ್ದರು. ಇದನ್ನು ಆರ್ ಎಸ್ ಎಸ್ ಟೀಕಿಸಿತ್ತು.
ಮೂರು ದಿನಗಳ ಕಾಲ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಆದರೆ ಇದಕ್ಕೆ ಯಾರು ಬರುತ್ತಾರೆ ಎನ್ನುವುದು ಇದುವರೆಗೆ ಅಂತಿಮವಾಗಿಲ್ಲ ಎಂದು ಆರ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಜೂನ್ ನಲ್ಲಿ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಇದಕ್ಕೆ ಕಾಂಗ್ರೆಸ್ಸಿಗರು ಟೀಕೆ ವ್ಯಕ್ತಪಡಿಸಿದ್ದರು.