ಕೋಲ್ಕತ್ತ: ಶನಿವಾರ ತಡರಾತ್ರಿ ನಗರದ ಕ್ಯಾನಿಂಗ್ ಸ್ಟ್ರೀಟ್ ಬಳಿ ಇರುವ ಬಾಗ್ರಿ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.
ಇನ್ನೂ ಬೆಂಕಿ ಅವಘಡದಲ್ಲಿ ಯಾರಿಗೂ ತೊದರೆಯಾಗಿಲ್ಲ ಎಂದು ವರದಿಯಾಗಿದ್ದು, ಮುಂಜಾನೆ 2.45ರ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡಗಳ ಸಂಖ್ಯೆ ಹೆಚ್ಚಿರುವುದರಿಂದ ಅಗ್ನಿಶಾಮಕ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.
ಅವಘಡದಲ್ಲಿ ಯಾರೂ ಸಹ ಗಾಯಗೊಂಡಿಲ್ಲ ಎಂದು ಕೋಲ್ಕತ್ತದ ಮೇಯರ್ ಸೋವನ್ ಚಟರ್ಜಿ ಹೇಳಿದ್ದಾರೆ.