ದೆಹಲಿ: ಅಧ್ಯಯನವೊಂದರಲ್ಲಿ 2015ರಿಂದ ಈವರೆಗೆ ದೇಶದಲ್ಲಿ ಹಸಿವಿನಿಂದ 56 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು.
ವರದಿಯಲ್ಲಿ ಮೃತರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಯ ಪಡಿತರ ಚೀಟಿಯಲ್ಲಿ ಆಧಾರ್ ಜೋಡನೆಯಿಂದಾಗಿ ಆಹಾರ ಪೂರೈಕೆ ರದ್ದಾಗಿತ್ತು ಎಂದು ತಿಳಿದು ಬಂದಿದೆ.
ಈ ಅಧ್ಯಯನವನ್ನು ಆಹಾರದ ಹಕ್ಕು ಅಭಿಯನದ ಭಾಗವಾಗಿ ಹಲವು ಸ್ವಯಂಸೇವಾ ಸಂಸ್ಥೆಗಳು ನಡೆಸಿದ್ದವು. ಈ ಕುರಿತಾದ ಮಾಹಿತಿಗಳು ‘ಹಸಿವಿನಿಂದ ಸಾವು: 2015-18’ ವರದಿಯಲ್ಲಿ ಪ್ರಕರಟವಾಗಿವೆ. ಮೃತರದಲ್ಲಿ ಹೆಚ್ಚಿನವರು ದಲಿತರು, ಆದಿವಾಸಿಗಳು ಹಾಗೂ ಮುಸ್ಲಿಮರೇ ಎಂದು ಗೊತ್ತಾಗಿದೆ.
ರಾಜ್ಯದಲ್ಲಿ ದಲಿತ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಾರಾಯಣ(55), ಸುಬ್ಬು(520 ಹಾಗೂ ವೆಂಕಟರಾಮ(46) ಮೃತರು.