News Kannada
Sunday, October 02 2022

ದೇಶ-ವಿದೇಶ

ಪತ್ನಿ ವಾಟ್ಸಾಪ್ ಚಾಟ್ ಪ್ರಶ್ನಿಸಿದ್ದಕ್ಕೆ ಪತಿ- ಸ್ನೇಹಿತೆ ಆತ್ಮಹತ್ಯೆಗೆ ಶರಣು - 1 min read

Photo Credit :

ಪತ್ನಿ ವಾಟ್ಸಾಪ್ ಚಾಟ್ ಪ್ರಶ್ನಿಸಿದ್ದಕ್ಕೆ ಪತಿ- ಸ್ನೇಹಿತೆ ಆತ್ಮಹತ್ಯೆಗೆ ಶರಣು

ಹೈದರಾಬಾದ್: 27 ವರ್ಷದ ವಿವಾಹಿತನೊಬ್ಬ ಮೆಸೇಜ್ ಆ್ಯಪ್ ನಲ್ಲಿ ತನ್ನ ಬಾಲ್ಯ ಸ್ನೇಹಿತೆಯೊಂದಿಗೆ ಮೆಸೇಜ್ ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದಕ್ಕೆ ಪತ್ನಿ ಜಗಳವಾಡಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ಸ್ನೇಹಿತೆಗೂ ಗೊತ್ತಾಗುತ್ತಿದ್ದಂತ್ತೆ ಆಕೆಯೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಘಟನೆ ಸಿಖಂದರ್ ಬಾದ್ ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೆ.ಶಿವ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಶನಿವಾರ ತನ್ನ ಮನೆಯಲ್ಲಿ ಈತ ನೇಣಿಗೆ ಶರಣಾಗಿದ್ದಾರೆ. ಈ ವಿಚಾರ ಮೆಸೇಜ್ ಮಾಡುತ್ತಿದ್ದ ಸ್ನೇಹಿತೆ ಸಿ. ವೆನ್ನೆಲ್ ಗೆ ತಿಳಿಯುತ್ತಿದ್ದಂತ್ತೆ ಆಕೆ ಖಿನ್ನತೆಗೆ ಒಳಗಾಗಿ ವಿಷ ಸೇವಿಸಿ ಅಂದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾಳೆ. 

ಪೊಲೀಸರ ಪ್ರಕಾರ, ಮೃತ ಕೆ. ಶಿವ ಕುಮಾರ್ ಆಗಸ್ಟ್ 15 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದಾದ ಬಳಿಕ ದಂಪತಿಗಳ ನಡುವೆ ಕೆಲವೊಂದು ವಿಚಾರಕ್ಕೆ ಜಗಳ ನಡೆಯುತ್ತಿದ್ದು, ಪತಿ ಶಿವ ನಿರಂತರ ಮೆಸೇಜ್ ನ್ನು ಮಾಡುತ್ತಿರುವುದನ್ನು ಪತ್ನಿ ಪ್ರಶ್ನಿಸಿದ್ದಾಳೆ.

ಕಳೆದ ಹಲವು ದಿನಗಳ ಬಳಿಕ ಪತಿ ಶಿವ ಯಾವುದೂ ಹುಡುಕಿ ಜತೆ ಸಂಪರ್ಕದಲ್ಲಿದ್ದಾನೆ ಎಂದು ಪತ್ನಿಗೆ ತಿಳಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದರಿಂದ ನೊಂದ ಶಿವ ಕುಮಾರ್ ಶನಿವಾರ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಶಿವ ಕುಮಾರ್ ಆತ್ಮಹತ್ಯೆ ವಿಚಾರ ಸಂದೇಶ ಕಳುಹಿಸುತ್ತಿದ್ದ ಬಾಲ್ಯ ಸ್ನೇಹಿತೆ ವೆನ್ನೆಲಾಗೆ ತಿಳಿಯುತ್ತಿದ್ದಂತ್ತೆ ಮನೆಯಲ್ಲಿ ಯಾರು ಇಲ್ಲದಾಗ ಆಕೆಯೂ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದೆ ಭಾನುವಾರ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

See also  ಕೊರೊನಾ ಅಪ್ಡೇಟ್: 24 ಗಂಟೆಯಲ್ಲಿ 22,854 ಮಂದಿಗೆ ಸೋಂಕು ದೃಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು